ಮಂಗಳವಾರ, ಅಕ್ಟೋಬರ್ 15, 2019
22 °C

ಬೆಂಗಳೂರು – ಸಿಂಗಪುರಮಧ್ಯೆ ಗೋ ಏರ್‌ ವಿಮಾನ ಸೇವೆ

Published:
Updated:

ಬೆಂಗಳೂರು: ವಿಮಾನಯಾನ ಸಂಸ್ಥೆ ಗೋ ಏರ್‌, ಬೆಂಗಳೂರು ಮತ್ತು ಕೋಲ್ಕತ್ತದಿಂದ ಸಿಂಗಪುರಕ್ಕೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ.

ಇದೇ 18 ರಿಂದ ಬೆಂಗಳೂರು – ಸಿಂಗಪುರ ಮಧ್ಯೆ ವಾರದಲ್ಲಿ ನಾಲ್ಕು ಬಾರಿ ಮತ್ತು 19 ರಿಂದ ಕೋಲ್ಕತ್ತ – ಸಿಂಗಪುರ ಮಧ್ಯೆ ವಾರದಲ್ಲಿ ಮೂರು ಬಾರಿ ಸೇವೆ ಲಭ್ಯ ಇರಲಿದೆ. ಮಿಜೋರಾಂನ ಐಜ್ವಾಲ್‌ಗೆ ಕೂಡ ವಿಮಾನ ಸೇವೆ ಆರಂಭಿಸಿದೆ.

ತಂತ್ರಜ್ಞಾನ ಕೇಂದ್ರದ ವಿಸ್ತರಣೆ

ಜಾಗತಿಕ ಪ್ರವಾಸೋದ್ಯಮಕ್ಕೆ ತಂತ್ರಜ್ಞಾನ ಒದಗಿಸುವ ಸಬ್ರೆ ಕಾರ್ಪೊರೇಷನ್‌, ಬೆಂಗಳೂರಿನಲ್ಲಿನ ತನ್ನ ತಂತ್ರಜ್ಞಾನ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿದೆ.

ವೈಟ್‌ಫೀಲ್ಡ್‌ನಲ್ಲಿನ ಐಟಿಪಿಎಲ್‌ ಟೆಕ್ ಪಾರ್ಕ್‌ನಲ್ಲಿನ ಹೊಸ ಕೇಂದ್ರವನ್ನು ಸಬ್ರೆ ಗ್ಲೋಬಲ್‌ ಡೆವಲಪ್‌ಮೆಂಟ್‌ ಸೆಂಟರ್‌ನ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್‌ ಕೆ ಅವರು ಉದ್ಘಾಟಿಸಿದ್ದಾರೆ. ಈ ಕೇಂದ್ರವು ಅಮೆರಿಕದ ನಂತರದ ಅತಿದೊಡ್ಡ ಕೇಂದ್ರವಾಗಿದೆ. 160 ದೇಶಗಳಲ್ಲಿನ ಗ್ರಾಹಕರಿಗೆ ಈ ಕೇಂದ್ರ ಸೇವೆ ಸಲ್ಲಿಸುತ್ತಿದೆ.

Post Comments (+)