ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಗಸ್ಟ್ ತಿಂಗಳಲ್ಲಿ ದೇಶದ ಚಿನ್ನದ ಆಮದು ದ್ವಿಗುಣ

Published : 17 ಸೆಪ್ಟೆಂಬರ್ 2024, 13:38 IST
Last Updated : 17 ಸೆಪ್ಟೆಂಬರ್ 2024, 13:38 IST
ಫಾಲೋ ಮಾಡಿ
Comments

ನವದೆಹಲಿ: ಆಗಸ್ಟ್ ತಿಂಗಳಲ್ಲಿ ದೇಶದ ಚಿನ್ನದ ಆಮದು ದುಪ್ಪಟ್ಟಿಗಿಂತಲೂ ಹೆಚ್ಚಾಗಿದ್ದು,10 ಬಿಲಿಯನ್ ಡಾಲರ್‌ಗೆ ವಹಿವಾಟು ಹೆಚ್ಚಳವಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ ಅಂಶದಿಂದ ತಿಳಿದುಬಂದಿದೆ.

ಚಿನ್ನದ ಆಮದಿನ ಮೇಲಿನ ಕಸ್ಟಮ್ ಸುಂಕ ಕಡಿತ ಮತ್ತು ಹಬ್ಬದ ಋತುವಾಗಿರುವುದರಿಂದ ಬೇಡಿಕೆ ಹೆಚ್ಚಿದೆ ಎಂದು ಅದು ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್, ಗಮನಾರ್ಹ ಮಟ್ಟದಲ್ಲಿ ಸುಂಕ ಇಳಿಕೆಯ ಪರಿಣಾಮ ಚಿನ್ನದ ಕಳ್ಳಸಾಗಣೆ ಮತ್ತು ಇತರೆ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದಿದ್ದಾರೆ.

'ಆಭರಣ ವ್ಯಾಪಾರಿಗಳು ತಮ್ಮ ದಾಸ್ತಾನನ್ನು ಹಬ್ಬದ ಋತುವಿನಲ್ಲಿ ಮಾರಾಟ ಮಾಡಲು ಪ್ರಾರಂಭಿಸುತ್ತಾರೆ’ಎಂದೂ ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 15ರಿಂದ ಶೇ 6ಕ್ಕೆ ಇಳಿಸಲಾಗಿತ್ತು.

2023-24ರ ಆರ್ಥಿಕ ವರ್ಷದಲ್ಲಿ ದೇಶದ ಚಿನ್ನದ ಆಮದು ಶೇ 30ರಷ್ಟು ಹೆಚ್ಚಾಗಿದೆ.

ಸ್ವಿಟ್ಜರ್‌ಲ್ಯಾಂಡ್‌ನಿಂದ ಅತ್ಯಧಿಕ ಪ್ರಮಾಣದಲ್ಲಿ(ಶೇ 40ರಷ್ಟು) ಭಾರತವು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಯುಎಇ(ಶೇ 16ರಷ್ಟು) ಮತ್ತು ದಕ್ಷಿಣ ಆಫ್ರಿಕಾ(ಶೇ 10) ದೇಶಗಳು ನಂತರದ ಸ್ಥಾನದಲ್ಲಿವೆ.

ದೇಶದ ಒಟ್ಟು ಆಮದಿನ ಶೇ 5ರಷ್ಟು ಭಾಗವನ್ನು ಚಿನ್ನ ಆವರಿಸಿಕೊಂಡಿದೆ.

ಚಿನ್ನದ ಆಮದುಗಳಲ್ಲಿನ ಜಿಗಿತವು ಆಗಸ್ಟ್‌ನಲ್ಲಿ ದೇಶದ ವ್ಯಾಪಾರ ಕೊರತೆಯನ್ನು (ಆಮದು ಮತ್ತು ರಫ್ತು ನಡುವಿನ ವ್ಯತ್ಯಾಸ) 29.65 ಶತಕೋಟಿ ಡಾಲರ್‌ಗೆ ತಳ್ಳಿದೆ.

ಚೀನಾ ಬಳಿಕ ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಚಿನ್ನ ಬಳಕೆ ಮಾಡುವ 2ನೇ ರಾಷ್ಟ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT