ಶುಕ್ರವಾರ, ಮಾರ್ಚ್ 24, 2023
22 °C

ಚಿನ್ನ, ಬೆಳ್ಳಿ ದರ ಏರಿಕೆ; 10 ಗ್ರಾಂ ಚಿನ್ನದ ದರ ₹ 418 ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚಿನ್ನ, ಬೆಳ್ಳಿ ಧಾರಣೆ ಸತತ ಎರಡನೇ ದಿನವೂ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ ₹ 418ರಷ್ಟು ಹೆಚ್ಚಾಗಿ ₹ 52,963ಕ್ಕೆ ತಲುಪಿದೆ.

ಬೆಳ್ಳಿ ಧಾರಣೆ ಕೆ.ಜಿಗೆ ₹ 2,246ರಷ್ಟು ಏರಿಕೆಯಾಗಿ ₹ 72,793ರಂತೆ ಮಾರಾಟವಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಂಗೆ ₹ 140ರಷ್ಟು ಹೆಚ್ಚಾಗಿ ₹52,040ರಂತೆ ಹಾಗೂ ಬೆಳ್ಳಿ ಕೆ.ಜಿಗೆ ₹ 2 ಸಾವಿರ ಹೆಚ್ಚಾಗಿ ₹ 69,500ರಂತೆ ಮಾರಾಟವಾಗಿದೆ.

‘ಡಾಲರ್‌ ಮೌಲ್ಯದಲ್ಲಿನ ಇಳಿಕೆಯಿಂದಾಗಿ ಚಿನ್ನದ ದರ ಏರಿಕೆಯಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್‌ ಪಟೇಲ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು