ಬೆಂಗಳೂರು: ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್ (28.34 ಗ್ರಾಂ) ಚಿನ್ನದ ಬೆಲೆ ಸುಮಾರು ₹26 ಸಾವಿರ ಹೆಚ್ಚಳವಾಗಿ, ₹3.35 ಲಕ್ಷವಾಗಲಿದೆ ಎಂದು ಸ್ವಿಟ್ಜರ್ಲೆಂಡ್ನ ಬ್ರೋಕರೇಜ್ ಸಂಸ್ಥೆ ಯುಬಿಎಸ್ ಅಂದಾಜಿಸಿದೆ.

2026ರ ಮಧ್ಯದ ವೇಳೆಗೆ ₹3.44 ಲಕ್ಷವಾಗಬಹುದು ಎಂದು ಸಂಸ್ಥೆ ಹೇಳಿದೆ. ಡಾಲರ್ ಮೌಲ್ಯ ಇಳಿಕೆ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟು ಹಳದಿ ಲೋಹದ ದರ ಏರಿಕೆಗೆ ಕಾರಣವಾಗಿವೆ ಎಂದು ಶುಕ್ರವಾರ ಹೇಳಿದೆ. ಇದು ಭಾರತ ಸೇರಿ ಜಾಗತಿಕ ಮಾರುಕಟ್ಟೆ ಮೇಲೂ ಪರಿಣಾಮ ಬೀರಬಹುದು ಎಂದಿದೆ.

ಸ್ವಿಸ್ ಬ್ಯಾಂಕ್ ಕೂಡ ಗೋಲ್ಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ದಾಸ್ತಾನಿನ ಅಂದಾಜನ್ನು ಪರಿಷ್ಕರಿಸಿದ್ದು, 2025ರ ಅಂತ್ಯದ ವೇಳೆಗೆ 3,900 ಟನ್ ಮೀರುವ ನಿರೀಕ್ಷೆಯಿದೆ. 2020ರ ಅಕ್ಟೋಬರ್ನಲ್ಲಿ 3,915 ಟನ್ ಚಿನ್ನ ಹೊಂದಿತ್ತು.

ಜಾಗತಿಕ ಮಟ್ಟದಲ್ಲಿನ ಆರ್ಥಿಕ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದ ಹೂಡಿಕೆದಾರರು ಚಿನ್ನವು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿದ್ದು, ಹೂಡಿಕೆಗೆ ಮುಂದಾಗಿದ್ದಾರೆ. ಇದರಿಂದ ಹಳದಿ ಲೋಹದ ದರ ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.