ಗುರುವಾರ , ಏಪ್ರಿಲ್ 9, 2020
19 °C

ಚಿನ್ನದ ಬೆಲೆ ಗಗನಮುಖಿ: 2 ದಿನಗಳಲ್ಲಿ ಪ್ರತಿ 10 ಗ್ರಾಂಗೆ ₹1,800 ಏರಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಚಿನ್ನದ ದರ

ಬೆಂಗಳೂರು: ಕೊರೊನಾ ಭೀತಿಯಿಂದ ಷೇರುಪೇಟೆ ಸೂಚ್ಯಂಕ ಇಳಿಕೆಯಾಗುತ್ತಿದ್ದರೆ, ಚಿನ್ನದ ಬೆಲೆ ಗಗನಮುಖಿಯಾಗಿದೆ. ಬುಧವಾರ ಎಂಸಿಎಕ್ಸ್‌ನಲ್ಲಿ ಗೋಲ್ಡ್‌ ಫ್ಯೂಚರ್ಸ್‌ 10 ಗ್ರಾಂ ದರ ಶೇ 0.5ರಷ್ಟು (₹213) ಏರಿಕೆಯೊಂದಿಗೆ ₹43,687 ಮುಟ್ಟಿತು. 

ಕಳೆದ ವಹಿವಾಟಿನಲ್ಲಿ 10 ಗ್ರಾಂ ಗೋಲ್ಡ್‌ ಫ್ಯೂಚರ್‌ ಶೇ 3.6 (₹1,544) ಹೆಚ್ಚಳವಾಗಿತ್ತು. ಬೆಳ್ಳಿ (ಸಿಲ್ವರ್‌ ಫ್ಯೂಚರ್ಸ್‌) ಸಹ ಪ್ರತಿ ಕೆ.ಜಿಗೆ ಶೇ 1ರಷ್ಟು ಏರಿಕೆಯೊಂದಿಗೆ ₹46,798 ತಲುಪಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಜಾಗತಿಕ ಮಟ್ಟದಲ್ಲಿ ಚಿನ್ನದ ದರ ಏರಿಕೆಯು ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುವಂತೆ ಮಾಡಿದೆ. 

ಹಿಂದಿನ ವಹಿವಾಟಿನಲ್ಲೂ ಬೆಳ್ಳಿ ಶೇ 3ರಷ್ಟು (₹1,295) ಏರಿಕಯಾಗಿತ್ತು. ಭಾರತ ಬಹುಪಾಲು ಚಿನ್ನವನ್ನು ಆಮದು ಮಾಡಿಕೊಳ್ಳುವುದರಿಂದ ಗ್ರಾಹಕರಿಗೆ ಚಿನ್ನ ಖರೀದಿ ಮೇಲೆ ತೆರಿಗೆಯ ಹೊರೆ ಬೀಳುತ್ತದೆ. ಶೇ 12.5ರಷ್ಟು ಆಮದು ಸುಂಕ ಮತ್ತು ಶೇ 3ರಷ್ಟು ಜಿಎಸ್‌ಟಿ ಸೇರುತ್ತದೆ. ಪ್ರಸ್ತುತ ದೇಶದಲ್ಲಿ ಪ್ರತಿ ಗ್ರಾಂ ಚಿನ್ನಕ್ಕೆ ₹43,788 ಆಗಿದೆ. 

ಡಾಲರ್‌ ಎದುರು ರೂಪಾಯಿ ₹73.50ರಲ್ಲಿ ವಹಿವಾಟು ನಡೆದಿದೆ. 

ಸರ್ಕಾರದ ಈ ಬಾರಿಯ 'ಗೋಲ್ಡ್‌ ಬಾಂಡ್‌' ಪಡೆಯಲು ಅರ್ಜಿ ಸಲ್ಲಿಕೆಗೆ ಮಾರ್ಚ್‌ 6 ಕೊನೆಯ ದಿನವಾಗಿದೆ. ಪ್ರತಿ ಗ್ರಾಂ ಚಿನ್ನಕ್ಕೆ ₹4,260 ನಿಗದಿ ಪಡಿಸಲಾಗಿದ್ದು, ಆನ್‌ಲೈನ್‌ ಪಾವತಿ ಮೂಲಕ ಬಾಂಡ್‌ ಪಡೆಯುವವರಿಗೆ ಪ್ರತಿ ಗ್ರಾಂಗೆ ₹50 ರಿಯಾಯಿತಿ ಸಿಗಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು