ನ್ಯೂಯಾರ್ಕ್: ಗೋಲ್ಡ್‌ಮನ್ ಸ್ಯಾಚ್ಸ್ ಕಂಪನಿಯು 3,200 ಮಂದಿಯನ್ನು ಕೆಲಸದಿಂದ ತೆಗೆಯಲು ಮುಂದಾಗಿದ್ದು, ಈ ವಾರದೊಳಗೆ ಆ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಉದ್ಯೋಗ ಕಡಿತದ ಕುರಿತು ಕಂಪನಿಯು ಪ್ರತಿಕ್ರಿಯೆ ನೀಡಿಲ್ಲ.
ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಸಿಬ್ಬಂದಿಯನ್ನು ಗುರಿಯಾಗಿ ಇಟ್ಟುಕೊಂಡು ಕಂಪನಿಯು ಪ್ರತಿ ವರ್ಷವೂ ಶೇ 1–5ರಷ್ಟು ಸಿಬ್ಬಂದಿ ಕಡಿತ ಮಾಡುತ್ತದೆ. ಆದರೆ, ಆರ್ಥಿಕ ಮುನ್ನೋಟ ಅನಿಶ್ಚಿತ ಆಗಿರುವುದರಿಂದ ಈ ಬಾರಿ ಸಿಬ್ಬಂದಿ ಕಡಿತದ ಪ್ರಮಾಣ ಹೆಚ್ಚಿರಲಿದೆ ಎಂದು ಡಿಸೆಂಬರ್‌ನಲ್ಲಿ ಮೂಲಗಳು ಹೇಳಿದ್ದವು.
2022ರ ಅಕ್ಟೋಬರ್ ಅಂತ್ಯದ ವೇಳೆಗೆ ಕಂಪನಿಯ ಸಿಬ್ಬಂದಿ ಸಂಖ್ಯೆ 49,100 ಇತ್ತು. 2019ರ ಅಂತ್ಯಕ್ಕೆ ಹೋಲಿಸಿದರೆ ಇದು ಶೇ 30ರಷ್ಟು ಹೆಚ್ಚು.