ನವದೆಹಲಿ: ದೇಶದ ಆರ್ಥಿಕತೆಯು 2019–20ನೇ ಹಣಕಾಸು ವರ್ಷದಲ್ಲಿ ಶೇ 5ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಅಂದಾಜಿಸಿದೆ.

ತಯಾರಿಕಾ ವಲಯದಲ್ಲಿನ ಬೆಳವಣಿಗೆಯು ಗಮನಾರ್ಹವಾಗಿ ಕಡಿಮೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ವರ್ಷದ ಹಿಂದೆ ಶೇ 6.2ರಷ್ಟಿದ್ದ ಈ ವಲಯದ ವೃದ್ಧಿಯು ಈಗ ಶೇ 2ಕ್ಕೆ ಕುಸಿಯಲಿದೆ ಎಂದು ನಿರೀಕ್ಷಿಸಲಾಗಿದೆ.

ಕಟ್ಟಡ ನಿರ್ಮಾಣ, ವಿದ್ಯುತ್ ಉತ್ಪಾದನೆ, ಅನಿಲ ಮತ್ತು ನೀರು ಪೂರೈಕೆ ವಲಯಗಳಲ್ಲಿ ಪ್ರಗತಿ ಕುಂಠಿತಗೊಂಡಿದೆ. ಗಣಿಗಾರಿಕೆ, ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಅಲ್ಪಮಟ್ಟಿಗೆ ಸುಧಾರಣೆ ಕಂಡು ಬರಲಿದೆ ಎಂದು ಎಣಿಕೆ ಹಾಕಲಾಗಿದೆ.

ಮೊದಲ ಎರಡು ತ್ರೈಮಾಸಿಕಗಳಲ್ಲಿನ ಆರ್ಥಿಕ ಬೆಳವಣಿಗೆ ದರ ಆಧರಿಸಿ ಈ ವಾರ್ಷಿಕ ದರದ ಮುಂಗಡ ಅಂದಾಜು ಮಾಡಲಾಗಿದೆ. ಮೊದಲ ಎರಡು ತ್ರೈಮಾಸಿಕಗಳಲ್ಲಿ ವೃದ್ಧಿ ದರವು 6 ವರ್ಷಗಳ ಹಿಂದಿನ ಕನಿಷ್ಠ ಮಟ್ಟವಾದ ಶೇ 5 ಮತ್ತು ಶೇ 4.5ಕ್ಕೆ ಕುಸಿದಿದೆ. ಹಣಕಾಸು ವರ್ಷದ ಮೊದಲಾರ್ಧದಲ್ಲಿನ ವೃದ್ಧಿ ದರವು ಶೇ 4.8ರಷ್ಟಾಗಿತ್ತು.

ಭಾರತೀಯ ರಿಸರ್ವ್ ಬ್ಯಾಂಕ್, ಡಿಸೆಂಬರ್‌ನಲ್ಲಿ ಪ್ರಕಟಿಸಿದ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ವೃದ್ಧಿ ದರವನ್ನು ಪರಿಷ್ಕರಿಸಿ ಶೇ 6.1 ರಿಂದ ಶೇ 5ಕ್ಕೆ ಇಳಿಸಿತ್ತು.

2018–19ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ 6.8ರಷ್ಟು ದಾಖಲಾಗಿತ್ತು. ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ಒಂದು ತಿಂಗಳ ಮುಂಚೆಯೇ ಮುಂಗಡ ಅಂದಾಜನ್ನು ಪ್ರಕಟಿಸಲಾಗುತ್ತಿದೆ.

ಹಣಕಾಸು ವರ್ಷದ ಮೊದಲ 7 ತಿಂಗಳಲ್ಲಿನ ಕೈಗಾರಿಕಾ ತಯಾರಿಕೆ ಸೂಚ್ಯಂಕ (ಐಐಪಿ), ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳ ಹಣಕಾಸು ಸಾಧನೆ, ಕೃಷಿ ಉತ್ಪಾದನೆ, ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಲೆಕ್ಕಪತ್ರ, ರೈಲ್ವೆ, ವಿಮಾನ ಮತ್ತು ಬಂದರಗಳಲ್ಲಿನ ಸರಕು ನಿರ್ವಹಣೆ ಮತ್ತು ಪ್ರಯಾಣಿಕರ ಸಂಖ್ಯೆ, ವಾಣಿಜ್ಯ ವಾಹನಗಳ ಮಾರಾಟ ಮತ್ತಿತರ ಮಾಹಿತಿ ಆಧರಿಸಿ ಜಿಡಿಪಿಯ ಮುಂಗಡ ಅಂದಾಜು ಮಾಡಲಾಗುತ್ತದೆ.

ವರ್ಷ

ಜಿಡಿಪಿ (%)

ಜಿವಿಎ (%)

2018–19

6.8

6.6

2019–20

5.0

4.9

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.