ನವದೆಹಲಿ: ಕಂದಾಯ ಇಲಾಖೆಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ನ 26ನೇ ಗವರ್ನರ್ ಆಗಿ ಸರ್ಕಾರ ಸೋಮವಾರ ನೇಮಿಸಿದೆ.

ಕ್ಯಾಬಿನೆಟ್ನ ಆಯ್ಕೆ ಸಮಿತಿಯು ಮಲ್ಹೋತ್ರಾ ಅವರ ಹೆಸರನ್ನು ಅಂತಿಮಗೊಳಿಸಿತು. ಇವರ ಕಾರ್ಯಾವಧಿ ಬುಧವಾರದಿಂದ ಮೂರು ವರ್ಷಗಳು ಇರಲಿವೆ.

ಭಾರತೀಯ ಆಡಳಿತ ಸೇವೆಯ (ಐಎಎಸ್) 1990ರ ತಂಡದ ಅಧಿಕಾರಿಯಾದ ಮಲ್ಹೋತ್ರಾ ಅವರು ರಾಜಸ್ಥಾನ ಕೇಡರ್ಗೆ ಆಯ್ಕೆಯಾಗಿದ್ದರು. ಕಾನ್ಪುರ ಐಐಟಿಯಿಂದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಮೆರಿಕದ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಪಬ್ಲಿಕ್ ಪಾಲಿಸಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

33 ವರ್ಷಗಳ ಸರ್ಕಾರಿ ಹುದ್ದೆಯಲ್ಲಿ ಇಂಧನ, ಆರ್ಥಿಕ ಹಾಗೂ ತೆರಿಗೆ, ಮಾಹಿತಿ ತಂತಜ್ಞಾನ, ಗಣಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಇವರು ಹಣಕಾಸು ಸಚಿವಾಲಯದ ಆದಾಯ ವಿಭಾಗದ ಕಾರ್ಯದರ್ಶಿಯಾಗಿದ್ದಾರೆ.

ಹಾಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಅಧಿಕಾರಾವಧಿ ಡಿ. 10ರಂದು ಕೊನೆಯಾಗಲಿದ್ದು, ಅವರಿಂದ ಮಲ್ಹೋತ್ರಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆರ್ಬಿಐನ 25ನೇ ಗವರ್ನರ್ ಆಗಿದ್ದ ದಾಸ್ ಅವರು, 2018ರ ಡಿ. 12ರಂದು ಅಧಿಕಾರ ವಹಿಸಿಕೊಂಡಿದ್ದರು. ಉರ್ಜಿತ್ ಪಟೇಲ್ ಅವರು ಅವಧಿಗೂ ಮುಂಚೆಯೇ ಹುದ್ದೆಯಿಂದ ಹಠಾತ್ ನಿರ್ಗಮನವಾದಾಗ ಶಕ್ತಿಕಾಂತ್ ದಾಸ್ ಅವರನ್ನೇ ಗವರ್ನರ್ ಆಗಿ ಸರ್ಕಾರ ನೇಮಿಸಿತ್ತು. ಮೂರು ವರ್ಷಗಳ ಸೇವೆ ನಂತರ, ಮತ್ತೆ ಮೂರು ವರ್ಷಗಳಿಗೆ ಅಧಿಕಾರಾವಧಿಯನ್ನು ವಿಸ್ತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.