ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಉಳಿತಾಯದ ಬಡ್ಡಿದರ ಹೆಚ್ಚಳ

Last Updated 20 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ:ರಾಷ್ಟ್ರೀಯ ಉಳಿತಾಯ ಪತ್ರ, ಸಾರ್ವಜನಿಕ ಭವಿಷ್ಯ ನಿಧಿ ಸೇರಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಈ ಅಕ್ಟೋಬರ್‌ 1ರಿಂದ ಆರಂಭವಾಗಿ ಡಿಸೆಂಬರ್‌ 31ಕ್ಕೆ ಕೊನೆಯಾಗುವ ತ್ರೈಮಾಸಿಕಕ್ಕೆ ಅನ್ವಯವಾಗುವಂತೆ ಪರಿಷ್ಕರಿಸಲಾಗಿದೆ. ಶೇ 0.4ರವರೆಗೆ ಬಡ್ಡಿದರವನ್ನು ಏರಿಕೆ ಮಾಡಲಾಗಿದೆ.

***

ಅವಧಿ: ಜುಲೈ 1–ಸೆ.30, 2018; ಅ.1–ಡಿ.31, 2018

ಹಿರಿಯ ನಾಗರಿಕರ ಯೋಜನೆಗಳ ಹೆಚ್ಚಳ ಎಷ್ಟು?

ಐದು ವರ್ಷಗಳ ಠೇವಣಿ 7.4; 7.8

ಆರ್‌.ಡಿ. 6.9; 7.3

ಹಿರಿಯ ನಾಗರಿಕರ ಉಳಿತಾಯ ಯೋಜನೆ 8.3; 8.7

***

ಅವಧಿ: ಜುಲೈ 1–ಸೆ.30, 2018; ಅ.1–ಡಿ.31, 2018

ಉಳಿತಾಯ ಯೋಜನೆಗಳು

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) 7.6; 8

ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ) 7.6; 8

ಕಿಸಾನ್‌ ವಿಕಾಸ ಪತ್ರ (ಕೆವಿಪಿ) 7.3 (ಮೆಚ್ಯುರಿಟಿ 118 ತಿಂಗಳು); 7.7 (ಮೆಚ್ಯುರಿಟಿ 112 ತಿಂಗಳು)

ಸುಕನ್ಯಾ ಸಮೃದ್ಧಿ 8.1; 8.5

4%

ಉಳಿತಾಯ ಖಾತೆ ಠೇವಣಿಯ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲ

* ಪ್ರತಿ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಣೆ

* ಕಳೆದ ಎರಡು ತ್ರೈಮಾಸಿಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ‌

* ಒಂದರಿಂದ ಮೂರು ವರ್ಷದ ವರೆಗಿನ ಠೇವಣಿಗಳ ಬಡ್ಡಿದರ ಶೇ 0.3ರಷ್ಟು ಏರಿಕೆ

* ಬ್ಯಾಂಕುಗಳಲ್ಲಿ ಠೇವಣಿ ಪ್ರಮಾಣ ಹೆಚ್ಚಾದ ಕಾರಣಕ್ಕೆ ಬಡ್ಡಿದರದಲ್ಲಿ ಏರಿಕೆ

* ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ಅನುಗುಣವಾಗಿ ಉಳಿತಾಯ ಯೋಜನೆಯಿಂದ ದೊರೆಯುವ ಬಡ್ಡಿಗೆ ತೆರಿಗೆ ಅನ್ವಯ. ಪಿಪಿಎಫ್‌ಗೆ ಮಾತ್ರ ಆದಾಯ ತೆರಿಗೆ ವಿನಾಯಿತಿ

* 2012ರ ಏಪ್ರಿಲ್‌ 1ರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಇಳಿಕೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಅಲ್ಪ ಪ್ರಮಾಣದಲ್ಲಿ ಏರಿಕೆ

* 2012ರ ಏಪ್ರಿಲ್‌ 1ರಂದು ಪಿಪಿಎಫ್‌ ಬಡ್ಡಿದರ ಗರಿಷ್ಠ ಅಂದರೆ ಶೇ 8.8ರಷ್ಟು ಇತ್ತು. ಬಳಿಕ ಬಡ್ಡಿದರ ಕುಸಿಯುತ್ತಲೇ ಸಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT