ನವದೆಹಲಿ: ಲೋಕಸಭೆಯಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಇಂದು (ಗುರುವಾರ) ಮಂಡನೆಯಾಗಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 'ಆದಾಯ ತೆರಿಗೆ ಮಸೂದೆ 2025' ಅನ್ನು ಪರಿಚಯಿಸಲಿದ್ದಾರೆ.

ಈ ಮೊದಲು ಬಜೆಟ್ ಭಾಷಣದ ವೇಳೆ ಹೊಸ ಆದಾಯ ತೆರಿಗೆ ಮಸೂದೆಯನ್ನು ಈ ಅಧಿವೇಶನದಲ್ಲಿ ಮಂಡಿಸುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.

1961ರ ಹಳೆಯ ಆದಾಯ ತೆರಿಗೆ ಕಾಯ್ದೆ ಬದಲಿಗೆ ಹೊಸ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರ ಯೋಜಿಸಿದೆ.

ಈಗ ಚಾಲ್ತಿಯಲ್ಲಿರುವ ಆದಾಯ ತೆರಿಗೆ ಕಾಯ್ದೆ ಬದಲಿಗೆ ಗ್ರಹಿಕೆಗೆ ಅನುಕೂಲಕರವಾಗುವಂತೆ ಸರಳೀಕರಣ ಮತ್ತು ಪುಟಗಳ ಸಂಖ್ಯೆಯನ್ನು ಶೇ 60ರಷ್ಟು ಕಡಿಮೆ ಮಾಡಿ ಹೊಸ ಕಾಯ್ದೆ ಮಂಡನೆಗೆ ಉದ್ದೇಶಿಸಲಾಗಿದೆ. ಹಳೆಯ ಕಾಯ್ದೆಯಲ್ಲಿನ ಅಸ್ಪಷ್ಟತೆ ತೆಗೆದುಹಾಕಿ ಸಾಮಾನ್ಯ ಜನರಿಗೆ ಅರ್ಥವಾಗುವಂತಹ ನಿಯಮಗಳ ಜಾರಿ ಈ ಕಾಯ್ದೆಯ ಉದ್ದೇಶವಾಗಿದೆ ಎಂದು ಸರ್ಕಾರ ಹೇಳಿದೆ.

ಹೊಸ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ಬಳಿಕ ಮತ್ತಷ್ಟು ಪರಿಶೀಲನೆಗೆ ಹಣಕಾಸಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಗೆ ಸಲ್ಲಿಸಲಾಗುತ್ತದೆ.
.Explainer: ಹೊಸ ಆದಾಯ ತೆರಿಗೆ ಕಾಯ್ದೆ ಏಕೆ? ಅನುಕೂಲವೇನು? ಇಲ್ಲಿದೆ ಮಾಹಿತಿ.ಆದಾಯ ತೆರಿಗೆ ಕಾನೂನು ಸರಳ, ಮುಂದಿನ ವಾರ ಹೊಸ ತೆರಿಗೆ ಮಸೂದೆ ಮಂಡನೆ: ನಿರ್ಮಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.