ಗುರುವಾರ , ಮೇ 13, 2021
25 °C

ಪಿಂಚಣಿ ಕ್ಷೇತ್ರದಲ್ಲಿ ಶೇ 74ರಷ್ಟು ಎಫ್‌ಡಿಐ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಿಂಚಣಿ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಇರುವ ಮಿತಿಯನ್ನು ಶೇಕಡ 74ಕ್ಕೆ ಹೆಚ್ಚಿಸುವ ಚಿಂತನೆ ಕೇಂದ್ರ ಸರ್ಕಾರಕ್ಕೆ ಇದೆ. ಇದಕ್ಕೆ ಸಂಬಂಧಿಸಿದ ಮಸೂದೆಯೊಂದನ್ನು ಕೇಂದ್ರವು ಮುಂಬರುವ ಸಂಸತ್ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಕಾಯ್ದೆ – 2013ಕ್ಕೆ ತಿದ್ದುಪಡಿ ತಂದು, ಎಫ್‌ಡಿಐ ಮಿತಿ ಹೆಚ್ಚಿಸಲಾಗುತ್ತದೆ. ಈಗಿನ ನಿಯಮಗಳ ಪ್ರಕಾರ ಪಿಂಚಣಿ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು ಶೇ 49ರ ಮಿತಿ ಮೀರುವಂತಿಲ್ಲ.

ಎನ್‌ಪಿಎಸ್‌ ಟ್ರಸ್ಟ್‌ಅನ್ನು ಪಿಎಫ್‌ಆರ್‌ಡಿಎಯಿಂದ ಬೇರೆ ಮಾಡುವ ಅಂಶ ಕೂಡ ತಿದ್ದುಪಡಿ ಮಸೂದೆಯಲ್ಲಿ ಅಡಕವಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು