ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಜಿಎಸ್ಟಿಯಲ್ಲಿ ಬರಲಿರುವ ಬದಲಾವಣೆಗಳು ದೇಶವಾಸಿಗಳಿಗೆ ದೀಪಾವಳಿ ಉಡುಗೊರೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಜಿಎಸ್ಟಿ ಅಡಿ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತಿರುವ ಬಹುತೇಕ ವಸ್ತುಗಳನ್ನು ಶೇ 5ರ ತೆರಿಗೆ ಹಂತಕ್ಕೆ ತರಲಾಗುತ್ತದೆ. ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತಿರುವ ಬಹುತೇಕ ವಸ್ತುಗಳನ್ನು ಶೇ 18ರ ತೆರಿಗೆ ಹಂತಕ್ಕೆ ತರಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ. ಜಿಎಸ್ಟಿಯ ಈಗಿನ ನಾಲ್ಕು ತೆರಿಗೆ ಹಂತಗಳಲ್ಲಿ ಇರುವ ಪ್ರಮುಖ ವಸ್ತುಗಳ ಮೇಲೊಂದು ಪಕ್ಷಿನೋಟ ಇಲ್ಲಿದೆ.

ಶೇಕಡ 5ರಷ್ಟು ತೆರಿಗೆ

ಸಕ್ಕರೆ, ಚಹಾ, ಅಡುಗೆ ಎಣ್ಣೆ, ಒಣದ್ರಾಕ್ಷಿ, ಮನೆಬಳಕೆಯ ಅಡುಗೆ ಅನಿಲ, ಗೋಡಂಬಿ, ₹500ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳು, ₹1,000ಕ್ಕಿಂತ ಕಡಿಮೆ ಬೆಲೆಯ ಉಡುಪುಗಳು, ಪ್ಯಾಕ್ ಮಾಡಿ ಲೇಬಲ್ ಅಂಟಿಸಿರುವ ಅಕ್ಕಿ, ಸಂಬಾರ ಪದಾರ್ಥಗಳು, ಅಗರಬತ್ತಿಗಳು, ಜೀವರಕ್ಷಕ ಔಷಧಗಳು, ಇನ್ಸ್ಟಾಂಟ್ ಅಲ್ಲದ ಕಾಫಿ ಪುಡಿ

ಶೇ 12ರಷ್ಟು ತೆರಿಗೆ

ಬೆಣ್ಣೆ, ತುಪ್ಪ, ಚೀಸ್, ಬಾದಾಮಿ, ಪಿಸ್ತಾ, ಖರ್ಜೂರ, ಹಣ್ಣಿನ ರಸ, ಜಾಮ್, ಛತ್ರಿಗಳು, ಕೆಲವು ಆಟಿಕೆಗಳು,

ಶೇ 18ರಷ್ಟು ತೆರಿಗೆ

ಮೊಬೈಲ್ ಫೋನ್ಗಳು, ತಲೆಗೆ ಸವರುವ ಎಣ್ಣೆ, ಬಂಡವಾಳ ಸರಕುಗಳು, ಟೂತ್ಪೇಸ್ಟ್, ಸೋಪು, ಐಸ್ ಕ್ರೀಂ, ಕಂಪ್ಯೂಟರ್ಗಳು

ಶೇ 28ರಷ್ಟು ತೆರಿಗೆ

ಸಿಗರೇಟು, ಸಣ್ಣ ಕಾರುಗಳು, ಹವಾ ನಿಯಂತ್ರಕ ಹಾಗೂ ಫ್ರಿಜ್ನಂತಹ ಗ್ರಾಹಕ ಬಳಕೆ ಉಪಕರಣಗಳು, ಐಷಾರಾಮಿ ಕಾರುಗಳು, ದ್ವಿಚಕ್ರ ವಾಹನಗಳು

(ಮಾಹಿತಿ: ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಸೀಮಾಸುಂಕ ಮಂಡಳಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.