ನವದೆಹಲಿ: ಬಿಜೆಪಿಯಲ್ಲಿ ಅಧಿಕಾರ, ಹುದ್ದೆ ಪಡೆಯಬೇಕು ಅಂದರೆ ಒಂದೋ ಪುಡಿ ರೌಡಿಗಳಾಗಿರಬೇಕು ಅಥವಾ ರೇಪಿಸ್ಟ್ ಆಗಿರಬೇಕು ಅಥವಾ ಕನಿಷ್ಠ ಪಕ್ಷ ಎರಡ್ಮೂರು ಬಾರಿ ಜೈಲಿಗಾದರೂ ಹೋಗಿ ಬಂದಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದರು.

ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಅಂತಹವರಿಗಾಗಿಯೇ ಪ್ರತ್ಯೇಕ ಸೆಲ್ ಮಾಡಿಕೊಂಡಿರುವ ಬಿಜೆಪಿ ಕರ್ನಾಟಕ ಘಟಕವು ಪವಿತ್ರ ಖಾದಿ ಬಟ್ಟೆ ಬಗ್ಗೆ ಮಾತಾಡುವುದು ಹಾಸ್ಯಾಸ್ಪದವಲ್ಲ. ಅವರಿಗೆ ಯಾವ ನೈತಿಕತೆಯೂ ಇಲ್ಲ’ ಎಂದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನೇ ಚೆಕ್ ಮೂಲಕ ಲಂಚ ಪಡೆದು ಹುದ್ದೆ ಗಿಟ್ಟಿಸಿಕೊಂಡಿರುವಾಗ, ಕೇಂದ್ರದ ಗೃಹ ಸಚಿವರನ್ನೇ ಕೋರ್ಟ್ ಗಡಿಪಾರು ಮಾಡಿರುವಾಗ, ರಾಜಧರ್ಮ ಪಾಲಿಸದ ಪ್ರಧಾನ ಮಂತ್ರಿಯೇ ಇರುವಾಗ ಉಳಿದವರದ್ದು ಯಥಾ ರಾಜಾ, ತಥಾ ಪಟಾಲಂ ಅಲ್ವೇ’ ಎಂದು ಅವರು ಪ್ರಶ್ನಿಸಿದರು.

‘ಆರ್ಎಸ್ಎಸ್ ಬೆಳಕಿನ ಸಾಮ್ರಾಜ್ಯವೋ, ದೇಶಕ್ಕೆ ಅಂಟಿದ ಕಗ್ಗತ್ತಲೆಯ ಕಾರ್ಮೋಡವೋ ಎಂಬುದು ದೇಶದ ಜನರಿಗೆ ಗೊತ್ತಿದೆ. ಸಂಘ ಪರಿವಾರದ ಅಂತರಂಗಗಳು ನರಕದ ಗರ್ಭಗುಡಿಯೊಳಗೆ ಬಚ್ಚಿಟ್ಟಿದ್ದಕ್ಕಿಂತ, ಹೂತಿಟ್ಟಿದ್ದೇ ಹೆಚ್ಚು. ಇಂತಹ ಪಾತಕಿತನಗಳನ್ನು ಬಯಲು ಮಾಡುತ್ತಲೇ ಇರುತ್ತೇನೆ. ಎರಡು ರೂಪಾಯಿಯ ಗತಿಗೇಡಿ ಭಕ್ತರ ಅಪಪ್ರಚಾರಕ್ಕೆ ಕಿವಿಗೊಡುವ ಪ್ರಶ್ನೆಯೇ ಇಲ್ಲ’ ಎಂದು ಅವರು ಹೇಳಿದರು.

‘ನಾನು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಬರುವಾಗ ನರೇಂದ್ರ ಮೋದಿ ಅವರ ಹೆಸರೇ ಇರಲಿಲ್ಲ. ನಾನು 50 ವರ್ಷಗಳ ಹಿಂದೆ ರಾಜಕೀಯಕ್ಕೆ ಬಂದೆ. 45 ವರ್ಷಗಳಿಂದಲೇ ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದೇನೆ. ಮೋದಿ ಅವರನ್ನು ಬೈದು ರಾಜಕಾರಣದಲ್ಲಿ ಇರಬೇಕು ಎಂಬ ಸ್ಥಿತಿ ನನಗೆ ಇಲ್ಲ’ ಎಂದು ಅವರು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.