ನವದೆಹಲಿ: ಕಾರುಗಳ ಮೇಲಿನ ಜಿಎಸ್ಟಿ ಇಳಿಕೆಯ ಪರಿಣಾಮವಾಗಿ ತನ್ನ ಕಾರುಗಳ ಬೆಲೆಯು ₹95,500ರವರೆಗೆ ಕಡಿಮೆ ಆಗಲಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾ ಮಂಗಳವಾರ ಹೇಳಿದೆ.

ಅಮೇಜ್ ಕಾರುಗಳ ಬೆಲೆಯು ₹95,500ರಷ್ಟು, ಸಿಟಿ ಮಾದರಿಯ ಬೆಲೆಯು ₹57,500ರಷ್ಟು, ಎಲಿವೇಟ್ ಬೆಲೆ ₹58,400ರಷ್ಟು ಕಡಿಮೆ ಆಗಲಿದೆ ಎಂದು ಕಂಪನಿಯು ಹೇಳಿದೆ. ಬೆಲೆ ಇಳಿಕೆಯು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.

ಜಿಎಸ್ಟಿ ಇಳಿಕೆಯ ಪರಿಣಾಮವಾಗಿ ಜೀಪ್ ಕಂಪನಿಯ ಕಾರುಗಳ ಬೆಲೆಯು ₹1.26 ಲಕ್ಷದಿಂದ ₹4.8 ಲಕ್ಷದವರೆಗೆ ಇಳಿಕೆ ಆಗಲಿದೆ. ಈ ಇಳಿಕೆ ಕೂಡ ಸೆಪ್ಟೆಂಬರ್ 22ರಿಂದ ಜಾರಿ ಆಗಲಿದೆ.

ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) ಕಾರುಗಳ ಬೆಲೆಯು ₹4.5 ಲಕ್ಷದಿಂದ ₹30.4 ಲಕ್ಷದವರೆಗೆ ಕಡಿಮೆ ಆಗಲಿದೆ. ಜೆಎಲ್ಆರ್ ಕಂಪನಿಯ ಕಾರುಗಳ ಬೆಲೆ ಇಳಿಕೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ.

ತನ್ನ ಕಾರುಗಳ ಬೆಲೆಯಲ್ಲಿ ₹6.9 ಲಕ್ಷದವರೆಗೆ ಇಳಿಕೆ ಆಗಲಿದೆ ಎಂದು ವೋಲ್ವೊ ಕಾರ್ ಇಂಡಿಯಾ ಪ್ರಕಟಣೆ ತಿಳಿಸಿದೆ. ಇದು ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.