ನವದೆಹಲಿ: 2024–25ರ ಆರ್ಥಿಕ ವರ್ಷದ ಏಪ್ರಿಲ್ನಿಂದ ಮಾರ್ಚ್ವರೆಗೆ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ಮೂಲಕ ಒಟ್ಟು ₹22.08 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

2023–24ರ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹದಲ್ಲಿ ಶೇ 9.4ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಮಾರ್ಚ್ ತಿಂಗಳಲ್ಲಿ ₹1.96 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿದ್ದು, ಶೇ 9.9ರಷ್ಟು ಏರಿಕೆಯಾಗಿದೆ. ಇದು ಈ ಆರ್ಥಿಕ ವರ್ಷದಲ್ಲಿ ಸಂಗ್ರಹವಾದ ಎರಡನೇ ಅತ್ಯಧಿಕ ಸಂಗ್ರಹವಾಗಿದೆ. ಏಪ್ರಿಲ್ ತಿಂಗಳಲ್ಲಿ ₹2.10 ಲಕ್ಷ ಕೋಟಿ ಸಂಗ್ರಹವಾಗಿತ್ತು ಎಂದು ತಿಳಿಸಿದೆ.

ದೇಶೀಯ ವಹಿವಾಟು ಮೇಲಿನ ಜಿಎಸ್ಟಿ ಸಂಗ್ರಹದಲ್ಲಿ ಶೇ 8.8ರಷ್ಟು ಹೆಚ್ಚಳವಾಗಿದ್ದು, ₹1.49 ಲಕ್ಷ ಕೋಟಿ ಸಂಗ್ರಹವಾಗಿದೆ. ಸರಕುಗಳ ಆಮದಿನಿಂದ ₹46,919 ಕೋಟಿ ಸಂಗ್ರಹವಾಗಿದೆ.

ಒಟ್ಟು ಸಂಗ್ರಹದಲ್ಲಿ ಕೇಂದ್ರ ಜಿಎಸ್ಟಿ ₹38,145 ಕೋಟಿ, ರಾಜ್ಯ ಜಿಎಸ್ಟಿ ₹49,891 ಕೋಟಿ ಮತ್ತು ಸಮಗ್ರ ಜಿಎಸ್ಟಿ ₹95,853 ಕೋಟಿಯಾಗಿದೆ. ಪರಿಹಾರ ಸೆಸ್ ಮೂಲಕ ₹12,253 ಕೋಟಿ ಸಂಗ್ರಹವಾಗಿದೆ.

ಮರುಪಾವತಿ (ರೀಫಂಡ್) ಪ್ರಮಾಣ ಶೇ 41ರಷ್ಟು ಹೆಚ್ಚಳವಾಗಿದ್ದು, ₹19,615 ಕೋಟಿಯಾಗಿದೆ. ಮರುಪಾವತಿ ಬಳಿಕ ನಿವ್ವಳ ಜಿಎಸ್ಟಿ ₹1.76 ಲಕ್ಷ ಕೋಟಿಯಾಗಿದೆ.

ಜಿಎಸ್ಟಿ ಸಂಗ್ರಹದ ಹೆಚ್ಚಳವು ವ್ಯಾಪಾರ ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಆರ್ಥಿಕ ಸ್ಥಿರತೆ ಮತ್ತು ಕಂಪನಿಗಳ ಸದೃಢ ತೆರಿಗೆ ಪಾವತಿಯನ್ನು ಸೂಚಿಸುತ್ತದೆ ಎಂದು ವಲಯದ ತಜ್ಞರು ಹೇಳಿದ್ದಾರೆ.

‘ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ವರಮಾನ ಸಂಗ್ರಹದಲ್ಲಿ ಶೇ 10ರಷ್ಟು ಹೆಚ್ಚಳವಾಗಿದೆ. ಗುಜರಾತ್, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಶೇ 1ರಿಂದ ಶೇ 7ರಷ್ಟು ಏರಿಕೆಯಾಗಿದೆ’ ಎಂದು ಡೆಲಾಯ್ಟ್ ಇಂಡಿಯಾ ಪಾಲುದಾರ ಎಂ.ಎಸ್. ಮಣಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.