ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ನಲ್ಲಿ ಜಿಎಸ್‌ಟಿ ವರಮಾನ ₹1.61 ಲಕ್ಷ ಕೋಟಿ ಸಂಗ್ರಹ

Published 1 ಜುಲೈ 2023, 12:28 IST
Last Updated 1 ಜುಲೈ 2023, 12:28 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಜೂನ್‌ ತಿಂಗಳಿನಲ್ಲಿ ₹1.61 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.

ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಈವರೆಗೆ ಸರಾಸರಿ ವರಮಾನ ಸಂಗ್ರಹವು ಸತತ ನಾಲ್ಕನೇ ಬಾರಿಗೆ ₹1.6 ಲಕ್ಷ ಕೋಟಿಯನ್ನು ದಾಟಿದೆ.

ಜೂನ್‌ನಲ್ಲಿ ಸಂಗ್ರಹ ಆಗಿರುವ ಒಟ್ಟು ಮೊತ್ತದಲ್ಲಿ ಕೇಂದ್ರ ಜಿಎಸ್‌ಟಿ ₹31,013 ಕೋಟಿ, ರಾಜ್ಯ ಜಿಎಸ್‌ಟಿ ₹38,292 ಕೋಟಿ, ಸಮಗ್ರ ಜಿಎಸ್‌ಟಿ ₹80,292 ಕೋಟಿ ಹಾಗೂ ಸೆಸ್‌ ₹11,900 ಕೋಟಿ ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್‌ನಲ್ಲಿ ಸಂಗ್ರಹ ಆಗಿರುವ ತೆರಿಗೆ ವರಮಾನವು ಕಳೆದ ವರ್ಷದ ಜೂನ್‌ಗಿಂತ ಶೇ 12ರಷ್ಟು ಹೆಚ್ಚಾಗಿದೆ. ಏಪ್ರಿಲ್‌ ತಿಂಗಳಿನಲ್ಲಿ ತೆರಿಗೆ ವರಮಾನವು ಸಾರ್ವಕಾಲಿಕ ದಾಖಲೆಯ ₹1.87 ಲಕ್ಷ ಕೋಟಿಗೆ ತಲುಪಿತ್ತು.

ತಿಂಗಳ ಸರಾಸರಿ ಜಿಎಸ್‌ಟಿ ಸಂಗ್ರಹವು 2021–22ರ ಏಪ್ರಿಲ್‌–ಜೂನ್‌ ಅವಧಿಗೆ ₹1.10 ಲಕ್ಷ ಕೋಟಿ, 2022–23ರ ಏಪ್ರಿಲ್‌–ಜೂನ್‌ ಅವಧಿಗೆ ₹1.51 ಲಕ್ಷ ಕೋಟಿ ಮತ್ತು 2023–23ರ ಏಪ್ರಿಲ್‌–ಜೂನ್‌ ಅವಧಿಗೆ ₹1.69 ಲಕ್ಷ ಕೋಟಿಯಷ್ಟು ಆಗಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT