ನವದೆಹಲಿ: ಜಿಎಸ್ಟಿ ದರದಲ್ಲಿ ಆಗಿರುವ ಪರಿಷ್ಕರಣೆಯು ದಿನಸಿ ವಸ್ತುಗಳು ಹಾಗೂ ನಿತ್ಯದ ಬಳಕೆಯ ಇತರ ವಸ್ತುಗಳಿಗೆ ಮಾಡುವ ವೆಚ್ಚದಲ್ಲಿ ಶೇಕಡ 13ರಷ್ಟು ಉಳಿತಾಯಕ್ಕೆ ಕಾರಣವಾಗುತ್ತದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ.

ಪರಿಷ್ಕೃತ ದರವು ಸೋಮವಾರದಿಂದ ಜಾರಿಗೆ ಬಂದಿದೆ. ಸಣ್ಣ ಕಾರು ಖರೀದಿಸಲು ಮುಂದಾಗುವವರು ಅಂದಾಜು ₹70 ಸಾವಿರ ಉಳಿತಾಯ ಮಾಡಲು ಸಾಧ್ಯವಿದೆ.

ಸ್ಟೇಷನರಿ, ಬಟ್ಟೆ, ಪಾದರಕ್ಷೆ ಮತ್ತು ಔಷಧಗಳ ಖರೀದಿ ಸಂದರ್ಭದಲ್ಲಿ ಶೇ 7ರಿಂದ ಶೇ 12ರವರೆಗೆ ಉಳಿತಾಯ ಆಗಲಿದೆ ಎಂದು ಸರ್ಕಾರವು ಅಂದಾಜಿಸಿದೆ. ವೈಯಕ್ತಿಕ ಆರೋಗ್ಯ ವಿಮೆ ಹಾಗೂ ಜೀವ ವಿಮಾ ಪಾಲಿಸಿಗಳ ಪ್ರೀಮಿಯಂ ಮೇಲಿನ ಉಳಿತಾಯವು ಶೇ 18ರಷ್ಟು ಇರಲಿದೆ.

ದಿನಸಿ ಉತ್ಪನ್ನಗಳು, ಕೃಷಿ ಉಪಕರಣಗಳು, ಬಟ್ಟೆ, ಔಷಧಗಳು ಮತ್ತು ವಾಹನಗಳು ಸೇರಿದಂತೆ ಒಟ್ಟು 375 ಉತ್ಪನ್ನಗಳ ಮೇಲಿನ ಜಿಎಸ್ಟಿ ದರ ಪರಿಷ್ಕರಣೆ ಆಗಿದೆ. ಜಿಎಸ್ಟಿ ಸುಧಾರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಜಿಎಸ್ಟಿ ಉಳಿತಾಯ ಉತ್ಸವ’ ಎಂದು ಕರೆದಿದ್ದಾರೆ.

1,800 ಸಿ.ಸಿ.ವರೆಗಿನ ಎಂಜಿನ್ ಸಾಮರ್ಥ್ಯದ ಟ್ರ್ಯಾಕ್ಟರ್ ಖರೀದಿಸುವವರಿಗೆ ₹40 ಸಾವಿರದವರೆಗೆ ಉಳಿತಾಯ ಆಗಲಿದೆ. 350 ಸಿ.ಸಿ.ವರೆಗಿನ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನ ಖರೀದಿಸುವವರಿಗೆ ₹8,000ದಷ್ಟು, 32 ಇಂಚುಗಳಿಗಿಂತ ಹೆಚ್ಚು ದೊಡ್ಡದಾದ ಟಿ.ವಿ. ಖರೀದಿಸುವವರಿಗೆ ₹3,500ರಷ್ಟು, ಹವಾನಿಯಂತ್ರಕ ಖರೀದಿ ಸಮಯದಲ್ಲಿ ₹2,800ರಷ್ಟು ಉಳಿತಾಯ ಆಗಲಿದೆ.
.GST | ಪರಿಷ್ಕೃತ ಜಿಎಸ್ಟಿ ಇಂದಿನಿಂದ ಜಾರಿ: 375 ಉತ್ಪನ್ನಗಳ ಬೆಲೆ ಕಡಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.