ಹುಂಡೈ ಅಯಾನಿಕ್ ಕಾರು ಮಾರುಕಟ್ಟೆಗೆ

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಮಾರಾಟ ವಿಸ್ತರಿಸಲು ಮುಂದಡಿ ಇರಿಸಿರುವ ಹುಂಡೈ ಮೋಟರ್ ಇಂಡಿಯಾ ಕಂಪನಿಯು ತನ್ನ ‘ಅಯಾನಿಕ್ 5’ ಕಾರನ್ನು ಇದೇ ವರ್ಷದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಈ ಕಾರು 2022ನೇ ಸಾಲಿನ ‘ವಿಶ್ವದ ವರ್ಷದ ಕಾರು’ ಪ್ರಶಸ್ತಿ ಪಡೆದಿದೆ ಎಂದು ಹುಂಡೈ ಹೇಳಿದೆ.
‘2028ರೊಳಗೆ ವಿದ್ಯುತ್ ಚಾಲಿತ ಕಾರುಗಳ ಆರು ಮಾದರಿಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದು ಹುಂಡೈ ಮೋಟರ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಉನ್ಸೂ ಕಿಮ್ ಹೇಳಿದ್ದಾರೆ.
ಈ ಕಾರು ಪ್ರತಿ ಗಂಟೆಗೆ 260 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.