ಭಾರತದ ಆದಾಯ ತೆರಿಗೆ ತಿದ್ದುಪಡಿ ಮಸೂದೆ 2025ರ ಪ್ರಮುಖ ಬದಲಾವಣೆಗಳು, CBDT ಅಧಿಕಾರ, ಮರುಪಾವತಿ ನಿಯಮಗಳು ಮತ್ತು MSME ಕಾನೂನು ತಿದ್ದುಪಡಿ ಕುರಿತು ವಿವರ.

ಬೆಂಗಳೂರು: ಸಂಸದೀಯ ಆಯ್ಕೆ ಸಮಿತಿ ಸಲಹೆ ಆಧರಿಸಿ ಹೊಸ ಆದಾಯ ತೆರಿಗೆ ಮಸೂದೆ 2025 ಅನ್ನು ಶುಕ್ರವಾರ ಹಿಂಪಡೆದಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹೊಸ ತಿದ್ದುಪಡಿ ಮಸೂದೆಯನ್ನು ಸೋಮವಾರ ಮಂಡಿಸಿದ್ದಾರೆ.

ವಿರೋಧ ಪಕ್ಷಗಳ ಆಕ್ರೋಶಗಳ ನಡುವೆಯೂ ಮಸೂದೆಯನ್ನು ಲೋಕಸಭೆಯಲ್ಲಿ ಹಿಂಪಡೆಯಲಾಗಿತ್ತು. ಮೂಲ ಮಸೂದೆಯಲ್ಲಿ ಮಾಡಬೇಕಾದ ಕೆಲವೊಂದು ಬದಲಾವಣೆಗಳ ಕುರಿತು ಶಿಫಾರಸು ಹಾಗೂ ಸಲಹೆಗಳನ್ನು 31 ಸದಸ್ಯರ ಆಯ್ಕೆ ಸಮಿತಿ ನೀಡಿತ್ತು. ಇವುಗಳನ್ನೂ ಒಳಗೊಂಡು ಹೊಸ ತಿದ್ದುಪಡಿ ಮಸೂದೆ ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಿದೆ.

ಹೊಸ ತಿದ್ದುಪಡಿ ಮಸೂದೆಯಲ್ಲಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಗೆ (CBDT) ಹೆಚ್ಚಿನ ಅಧಿಕಾರ ನೀಡಲಾಗಿದ್ದು, ಈ ಹಿಂದೆ ವಿವಿಧ ಕಾರ್ಯವಿಧಾನಗಳ ಬದಲಾವಣೆಗೆ ಆದಾಯ ತೆರಿಗೆ ಇಲಾಖೆಯು ಸಂಸತ್ತಿನ ಮೊರೆ ಹೋಗಬೇಕಿತ್ತು. ಹೊಸ ಮಸೂದೆಯ ನಿಯಮ 533ರ ಅಡಿಯಲ್ಲಿ ಅನುಸರಣಾ ಕ್ರಮಗಳನ್ನು ಪರಿಚಯಿಸಿವುದು, ಹೊಸ ತೆರಿಗೆ ಆಡಳಿತ ನಿಯಮಗಳನ್ನು ರೂಪಿಸುವುದು ಹಾಗೂ ಡಿಜಿಟಲ್ ತೆರಿಗೆ ನಿರ್ವಹಣೆಯನ್ನು ಕೇಂದ್ರೀಯ ಮಂಡಳಿಯು ಸ್ವತಂತ್ರವಾಗಿ ನಿರ್ವಹಿಸಬಹುದಾಗಿದೆ.

ಹಣಕಾಸು ಸಚಿವಾಲಯವು ಮಸೂದೆಗೆ ತಿದ್ದುಪಡಿ ತರಲು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ತೆರಿಗೆದಾರರು, ಕೈಗಾರಿಕೆಗಳ ಪರಿಣಿತರನ್ನೂ ಒಳಗೊಂಡು ಸುಮಾರು 6,500 ಸಲಹೆಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಭಾಷೆಯನ್ನು ಸರಳಗೊಳಿಸುವ, ಗೊಂದಲಗಳನ್ನು ಕಡಿಮೆ ಮಾಡುವ, ಅನುಸರಣೆಯನ್ನು ಸರಾಗಗೊಳಿಸುವ ಹಾಗೂ ಬಳಕೆಯಲ್ಲಿಲ್ಲದ ನಿಬಂಧನೆಗಳನ್ನು ತೆಗೆದುಹಾಕುವ ಸಲಹೆಗಳನ್ನು ನೀಡಲಾಗಿತ್ತು.
.ಲೋಕಸಭೆ: ತೆರಿಗೆ ಕಾನೂನು ತಿದ್ದುಪಡಿ ಮಸೂದೆ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್.ಗದ್ದಲದ ನಡುವೆಯೇ ಸಂಸತ್ನಲ್ಲಿ ಎರಡು ಕ್ರೀಡಾ ಮಸೂದೆಗಳ ಅಂಗೀಕಾರ.
ಸಮಿತಿ ನೀಡಿದ ಹತ್ತು ಅಂಶಗಳು ಯಾವುವು?

1. ಅಸ್ತಿತ್ವದಲ್ಲಿರುವ ತೆರಿಗೆ ಕಾನೂನಿನ ಚೌಕಟ್ಟುಗಳನ್ನು ಇನ್ನಷ್ಟು ಸರಿಪಡಿಸುವ ಉದ್ದೇಶದಿಂದ ವಾಖ್ಯಾನಗಳನ್ನು ಭಿಗಿಗೊಳಿಸುವುದು, ಗೊಂದಲಗಳನ್ನು ನಿವಾರಿಸುವುದು

2. ಸಮಗ್ರ ಚರ್ಚೆಯ ನಂತರ ತೆರಿಗೆ ಆಡಳಿತವನ್ನು ಸರಳಗೊಳಿಸುವುದು ಹಾಗೂ ಆದಾಯ ತೆರಿಗೆ ಕಾನೂನನ್ನು ಇನ್ನಷ್ಟು ಸರಳ ಹಾಗೂ ಸ್ಪಷ್ಟಗೊಳಿಸುವುದನ್ನೂ ಒಳಗೊಂಡು 285 ಶಿಫಾರಸುಗಳನ್ನು ಈ ಸಮಿತಿ ನೀಡಿತ್ತು.

3. ಹೊಸ ಮಸೂದೆಯಲ್ಲಿದ್ದ ಕೆಲವೊಂದು ಗೊಂದಲಕಾರಿ ಅಂಶಗಳನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕು ಎಂದು ಸಮಿತಿ ಹೇಳಿತ್ತು. ಸಲ್ಲಿಕೆಯಾದ ಸಲಹೆಗಳನ್ನು ಆಧರಿಸಿ ಹಲವು ಕರಡು ತಿದ್ದುಪಡಿಗಳನ್ನು ಗುರುತಿಸಿ ಸಮಿತಿ ವರದಿ ಮಾಡಿತ್ತು.

4. ಒಟ್ಟು 4,584 ಪುಟಗಳಲ್ಲಿ 566 ಶಿಫಾರಸುಗಳನ್ನು ಈ ಸಂಸದೀಯ ಸಮಿತಿ ನೀಡಿತ್ತು

5. ಆದಾಯ ತೆರಿಗೆ ಮರುಪಾವತಿಗೆ ಸಂಬಂಧಿಸಿದಂತೆ ಸಮಿತಿಯು ಕೆಲ ಶಿಫಾರಸುಗಳನ್ನು ಮಾಡಿತ್ತು. ಇದರಲ್ಲಿ ಕೊನೆ ದಿನದ ನಂತರ ಆದಾಯ ತೆರಿಗೆ ರಿಟರ್ನ್ಸ್ಗಳನ್ನು ಸಲ್ಲಿಸುವವರಿಗೆ ಮರುಪಾವತಿ ನಿರಾಕರಿಸುವುದಕ್ಕೆ ತಿದ್ದುಪಡಿ ತರಲು ಸಮಿತಿ ಶಿಫಾರಸು ಮಾಡಿತ್ತು. ಈ ಹಿಂದಿನ ಮಸೂದೆಯಲ್ಲಿ ಅವಧಿಯೊಳಗೆ ರಿಟರನ್ಸ್ ಸಲ್ಲಿಸಿದರೆ ಮಾತ್ರ ಮರುಪಾವತಿಗೆ ತೆರಿಗೆದಾರರು ಅರ್ಹರಾಗಿದ್ದರು.

6. ಕಂಪನಿಗಳ ಆಂತರಿಕ ಕಾರ್ಪೊರೇಟ್ ಲಾಭಾಂಶದಡಿ ಸೆಕ್ಷನ್ 115ಬಿಎಎ ಅಡಿಯಲ್ಲಿ ಸಿಗುತ್ತಿದ್ದ ವಿಶೇಷ ರಿಯಾಯಿತಿಯನ್ನು ಬದಲಿಸಲು ಅನುಕೂಲವಾಗುವಂತೆ ಸೆಕ್ಷನ್ 80ಎಂ ಕಡಿತಕ್ಕೆ (ಹೊಸ ಮಸೂದೆಯ 148ನೇ ನಿಯಮದಡಿ) ತಿದ್ದುಪಡಿ ತರಲು ಸಮಿತಿ ಶಿಫಾರಸು ಮಾಡಿತ್ತು.

7. ಹೊಸ ಆದಾಯ ತೆರಿಗೆ ಮಸೂದೆಯಲ್ಲಿ NIL ಟಿಡಿಎಸ್ ಪ್ರಮಾಣಪತ್ರ ಪಡೆಯಲು ತೆರಿಗೆದಾರರಿಗೆ ಅವಕಾಶ ಕಲ್ಪಿಸಲು ಸಮಿತಿ ಸಲಹೆ ನೀಡಿತ್ತು.

8. ಕೆಲ ಹಂತಗಳ ಆದಾಯ ಹೊಂದಿರುವವರಿಗೆ ತೆರಿಗೆ ರಿಯಾಯಿತಿ ನೀಡುವ ಕೆಲ ಮಾಧ್ಯಮ ವರದಿಗಳನ್ನು ಆದಾಯ ತೆರಿಗೆ ಇಲಾಖೆ ನಿರಾಕರಿಸಿದ್ದು, ತೆರಿಗೆ ಸ್ಲಾಬ್ಗಳಲ್ಲಿ ಯಾವುದೇ ಬದಲಾವಣೆಗೆ ಸಮಿತಿ ಶಿಫಾರಸು ಮಾಡಿಲ್ಲ ಎಂದಿದೆ.

9. ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳಿಗಾಗಿ ಇರುವ MSME ಕಾಯ್ದೆಯಲ್ಲಿ ಒಂದಷ್ಟು ಬದಲಾವಣೆ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ.

10. ಭವಿಷ್ಯ ನಿಧಿಯ ಮುಂಗಡ ಆಡಳಿತ ಶುಲ್ಕಗಳು, ಕಡಿಮೆ ತೆರಿಗೆ ಪ್ರಮಾಣಪತ್ರ ಹಾಗೂ ದಂಡ ವಿಧಿಸುವ ಅಧಿಕಾರ ಕುರಿತು ಹೆಚ್ಚು ಸ್ಪಷ್ಟತೆಯನ್ನು ಸಮಿತಿ ಬಯಸಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.