ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕರ ನೇಮಕ | ಷೇರುದಾರರ ಒಪ್ಪಿಗೆ ಕಡ್ಡಾಯ: ಸೆಬಿ

Last Updated 30 ಮಾರ್ಚ್ 2023, 2:56 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳಲ್ಲಿ ಷೇರುದಾರರು ಮತ್ತು ಸಾಲದಾತರಿಗೆ ಹೆಚ್ಚಿನ ಅಧಿಕಾರ ನೀಡುವ ಉದ್ದೇಶದಿಂದ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಕೆಲವೊಂದು ಬದಲಾವಣೆಗಳನ್ನು ತರಲು ಮುಂದಾಗಿದೆ.

ಕಂಪನಿಗಳ ಆಡಳಿತ ಮಂಡಳಿಯಲ್ಲಿ ಶಾಶ್ವತವಾಗಿ ಸ್ಥಾನ ಹೊಂದುವ ಪರಿಪಾಠ ಕೊನೆಗೊಳಿಸಲು ಸೆಬಿ ನಿರ್ಧರಿಸಿದೆ. ನಿರ್ದೇಶಕರ ಆಯ್ಕೆಯು ಪ್ರತಿ ಐದು ವರ್ಷಗಳಿಗೆ ಒಮ್ಮೆ ಮತದಾನದ ಮೂಲಕ ನಡೆಯಲಿದೆ. ಯಾವುದೇ ನಿರ್ದೇಶಕರನ್ನು ನೇಮಕ ಮಾಡಲು ಷೇರುದಾರರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಲಿದೆ ಎಂದು ಸೆಬಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬದಲಾವಣೆಗಳು ಯಾವಾಗ ಜಾರಿಗೆ ಬರಲಿವೆ ಎನ್ನುವ ಕುರಿತು ಸೆಬಿ ಮಾಹಿತಿ ನೀಡಿಲ್ಲ. ಆದರೆ, ಹೊಸ ನಿಯಮಗಳು 2024ರ ಏಪ್ರಿಲ್‌ನಿಂದ ಜಾರಿಗೆ ಬರಲಿವೆ ಎಂದು ಸೆಬಿ ಫೆಬ್ರುವರಿ
ಯಲ್ಲಿ ಬಿಡುಗಡೆ ಮಾಡಿದ್ದ ಸಮಾಲೋಚನಾ ಟಿಪ್ಪಣಿಯಲ್ಲಿ ಹೇಳಿತ್ತು.

ನಿರ್ದೇಶಕರು, ಅನುಸರಣೆ ಅಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುಖ್ಯ ಹಣಕಾಸು ಅಧಿಕಾರಿಯಂತಹ ಪ್ರಮುಖ ಹುದ್ದೆಗಳನ್ನು ಖಾಲಿಯಾದ ಮೂರು ತಿಂಗಳ ಒಳಗಾಗಿ ಭರ್ತಿ ಮಾಡುವಂತೆ ಸೆಬಿ ಹೇಳಿದೆ. ನೋಂದಾಯಿತ ಕಂಪನಿ
ಗಳು ಷೇರುದಾರರಿಗೆ ನೀಡುವಯಾವುದೇ ವಿಶೇಷ ಹಕ್ಕುಗಳಿಗೆ ಕಾಲಕಾಲಕ್ಕೆ ಷೇರುದಾರರ ಒಪ್ಪಿಗೆ ಅಗತ್ಯ ಎಂದು ಹೇಳಿದೆ.

ಷೇರು ದಲ್ಲಾಳಿಗಳ ವಂಚನೆ ತಡೆಗೆ ಕ್ರಮ: ಷೇರು ದಲ್ಲಾಳಿಗಳು ನಡೆಸುವ ವಂಚನೆ ಪತ್ತೆ ಮಾಡಲು ಮತ್ತು ತಡೆಯಲು ವ್ಯವಸ್ಥೆಯೊಂದನ್ನು ರೂಪಿಸುವುದಾಗಿ ಸೆಬಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT