ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಚಿನ್ನಾಭರಣ ಬೇಡಿಕೆ, ಚಿನ್ನದ ಮೇಲಿನ ಹೂಡಿಕೆ ಹೆಚ್ಚಳ: ಡಬ್ಲ್ಯುಜಿಸಿ

2022ರ ಜನವರಿ–ಮಾರ್ಚ್ ಅವಧಿ: ತಗ್ಗಿದ ಚಿನ್ನಾಭರಣ ಬೇಡಿಕೆ
Last Updated 28 ಏಪ್ರಿಲ್ 2022, 11:10 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ 2021ರ ಜನವರಿ–ಮಾರ್ಚ್‌ ಅವಧಿಗೆ ಹೋಲಿಸಿದರೆ 2022ರ ಜನವರಿ–ಮಾರ್ಚ್‌ ಅವಧಿಯಲ್ಲಿ ಚಿನ್ನಾಭರಣ ಬೇಡಿಕೆಯು ಶೇಕಡ 26ರಷ್ಟು ಕಡಿಮೆ ಆಗಿದೆ. ಇದೇ ಅವಧಿಯಲ್ಲಿ, ಚಿನ್ನದ ಮೇಲಿನ ಹೂಡಿಕೆಯು ಶೇ 5ರಷ್ಟು ಹೆಚ್ಚಾಗಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಹೇಳಿದೆ.

ಚಿನ್ನದ ಬೆಲೆ ಏರಿಕೆಯಿಂದಾಗಿ ಜನರು ಚಿನ್ನಾಭರಣ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಆದರೆ, ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅನಿಶ್ಚಿತ ಸ್ಥಿತಿಯ ಕಾರಣದಿಂದಾಗಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗಿದೆ ಎಂದು ಡಬ್ಲ್ಯುಜಿಸಿ ಭಾರತದ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸೋಮಸುಂದರಂ ಪಿ.ಆರ್‌. ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೇಶದಲ್ಲಿ ಮದುವೆ ಸಮಾರಂಭಗಳ ಸಂಖ್ಯೆ ಕಡಿಮೆ ಆಗಿರುವುದು ಹಾಗೂ ಚಿನ್ನಾಭರಣ ಖರೀದಿಸುವ ಶುಭ ಸಂದರ್ಭಗಳು ಇಲ್ಲದಿದ್ದ ಕಾರಣದಿಂದಾಗಿ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ರಿಟೇಲ್‌ ಬೇಡಿಕೆಯು ಕಡಿಮೆ ಆಗಿದೆ. ಚಿನ್ನದ ಬೆಲೆ ಇಳಿಕೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಜನ ಖರೀದಿಯನ್ನು ಮುಂದೂಡುತ್ತಿದ್ದಾರೆ ಎಂದು ಅವರು ಹೇಳಿದರು.

ಚಿನ್ನದ ಬೆಲೆ ಏರಿಕೆ ಮತ್ತು ಈಕ್ವಿಟಿ ಮಾರುಕಟ್ಟೆಯಲ್ಲಿನ ಅನಿಶ್ಚಿತ ಸ್ಥಿತಿಯಿಂದಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಮೇಲೆ ಹೂಡಿಕೆ ಹೆಚ್ಚಾಗುತ್ತಿದೆ ಎಂದು ಡಬ್ಲ್ಯುಜಿಸಿ ವರದಿ ತಿಳಿಸಿದೆ.

ಜನವರಿಯಿಂದ ಚಿನ್ನದ ಬೆಲೆ ಹೆಚ್ಚಾಗಲು ಆರಂಭವಾಯಿತು. ಜಾಗತಿಕ ಬಿಕ್ಕಟ್ಟಿನಿಂದಾಗಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 10 ಗ್ರಾಂ ಚಿನ್ನದ ದರವು ಶೇ 8ರಷ್ಟು ಹೆಚ್ಚಾಗಿ ₹ 45,434ಕ್ಕೆ (ತೆರಿಗೆ ಹೊರತುಪಡಿಸಿ) ಏರಿಕೆ ಆಯಿತು ಎಂದು ಸೋಮಸುಂದರಂ ತಿಳಿಸಿದರು.

ಬೇಡಿಕೆ ವಿವರ (ಟನ್‌ಗಳಲ್ಲಿ)

2021 ಜನವರಿ–ಮಾರ್ಚ್‌; 2022 ಜನವರಿ–ಮಾರ್ಚ್‌; ಏರಿಳಿತ (%)

ಚಿನ್ನಾಭರಣ;126.5;94.2;–26 ಇಳಿಕೆ

ಹೂಡಿಕೆ;39.3;41.3;5 ಏರಿಕೆ

ಒಟ್ಟಾರೆ;165.8;135.5;–18 ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT