ಮಂಗಳವಾರ, ಮೇ 18, 2021
22 °C

ಭಾರತದಿಂದ ಔಷಧ ಉತ್ಪನ್ನಗಳ ರಫ್ತು 2020–21ರಲ್ಲಿ ಶೇ 18ರಷ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ಭಾರತದಿಂದ ಔಷಧ ಉತ್ಪನ್ನಗಳ ರಫ್ತು 2019–20ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2020–21ನೇ ಹಣಕಾಸು ವರ್ಷದಲ್ಲಿ ಶೇ 18ರಷ್ಟು ಏರಿಕೆ ಆಗಿದೆ ಎಂದು ಫಾರ್ಮಾ ಸ್ಯುಟಿಕಲ್ಸ್ ಎಕ್ಸ್‌ಪೋರ್ಟ್‌ ಪ್ರಮೋಷನ್‌ ಕೌನ್ಸಿಲ್‌ ಆಫ್‌ ಇಂಡಿಯಾ ತಿಳಿಸಿದೆ.

ಮೌಲ್ಯದ ಲೆಕ್ಕದಲ್ಲಿ ₹ 1.58 ಲಕ್ಷ ಕೋಟಿಗಳಿಂದ ₹ 1.79 ಲಕ್ಷ ಕೋಟಿಗಳಿಗೆ ಏರಿಕೆ ಆಗಿದೆ. 2021ರ ಮಾರ್ಚ್‌ ತಿಂಗಳಿನಲ್ಲಿ ರಫ್ತು ವಹಿವಾಟು ಶೇ 48.5ರಷ್ಟು ಭಾರಿ ಏರಿಕೆ ಕಂಡಿದ್ದು, ₹ 17,020 ಕೋಟಿಗಳಷ್ಟಾಗಿದೆ. 2020ರ ಮಾರ್ಚ್‌ನಲ್ಲಿ ರಫ್ತು ಮೌಲ್ಯವು ₹ 11,396 ಕೋಟಿಗಳಷ್ಟಿತ್ತು ಎಂದು ಕೌನ್ಸಿಲ್‌ನ ಪ್ರಧಾನ ನಿರ್ದೇಶಕ ಉದಯ್‌ ಭಾಸ್ಕರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2020ರ ಮಾರ್ಚ್‌ನಲ್ಲಿ ಜಾಗತಿಕವಾಗಿ ಲಾಕ್‌ಡೌನ್‌ ಇದ್ದಿದ್ದರಿಂದ ಪೂರೈಕೆ ವ್ಯವಸ್ಥೆಗೆ ಅಡ್ಡಿಯಾಗಿತ್ತು. ಹೀಗಾಗಿ 2020ರ ಮಾರ್ಚ್‌ಗೆ ಹೋಲಿಸಿದರೆ 2021ರ ಮಾರ್ಚ್‌ ರಫ್ತು ವಹಿವಾಟು ಹೆಚ್ಚಿನ ಬೆಳವಣಿಗೆ ಕಂಡಿದೆ.

2020ರಲ್ಲಿ ಜಾಗತಿಕ ಔಷಧ ಮಾರುಕಟ್ಟೆಯು ಶೇ 1 ರಿಂದ ಶೇ 2ರಷ್ಟು ನಕಾರಾತ್ಮಕ ಬೆಳವಣಿಗೆ ಕಂಡಿದ್ದ ಸಮಯದಲ್ಲಿ ಗುಣಮಟ್ಟ ಮತ್ತು ಬೆಲೆಯ ದೃಷ್ಟಿಯಿಂದ ಭಾರತದಲ್ಲಿ ತಯಾರಾದ ಔಷಧಗಳಿಗೆ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಯಿತು ಎಂದು ಅವರು ತಿಳಿಸಿದ್ದಾರೆ.

ಭಾರತದ ಲಸಿಕೆಗಳ ರಫ್ತು ಮುಂಬರುವ ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆಯನ್ನು ಕೌನ್ಸಿಲ್‌ ಇಟ್ಟುಕೊಂಡಿದೆ. ಉತ್ಪನ್ನ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯಿಂದ ಆಮದು ಅವಲಂಬನೆ ತಗ್ಗಿಸುವ ಮೂಲಕ ದೇಶಿ ಔಷಧ ತಯಾರಕರ ಬೆಳವಣಿಗೆಗೆ ಅನುಕೂಲ ಆಗಲಿದೆ. ರಫ್ತು ವಹಿವಾಟು ಬೆಳವಣಿಗೆಗೆ ನೆರವಾಗಲಿದೆ ಎಂದು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು