ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿರ್ಬಂಧ: 9 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಇಂಧನ ಬೇಡಿಕೆ

Last Updated 11 ಜೂನ್ 2021, 14:52 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿರುವುದು ಮತ್ತು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ದೇಶದ ಇಂಧನ ಬೇಡಿಕೆಯು ಮೇ ತಿಂಗಳಲ್ಲಿ 9 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಇಂಧನ ಬೇಡಿಕೆ ಶೇ 1.5ರಷ್ಟು, ಅಂದರೆ 1.51 ಕೋಟಿ ಟನ್‌ ಇಳಿಕೆಯಾಗಿದೆ. ಇದು ಏಪ್ರಿಲ್ ಬೇಡಿಕೆಗಿಂತ ಶೇ 11.3ರಷ್ಟು ಕಡಿಮೆಯಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ‘ಪೆಟ್ರೋಲಿಯಂ ಪ್ಲಾನಿಂಗ್ ಆ್ಯಂಡ್ ಅನಾಲಿಸಿಸ್ ಸೆಲ್ (ಪಿಪಿಎಸಿ)’ ದತ್ತಾಂಶಗಳಿಂದ ತಿಳಿದುಬಂದಿದೆ. 2020ರಲ್ಲಿಯೂ ಕಡಿಮೆ ಬೇಡಿಕೆ ಇತ್ತು.

ಭಾರತದಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ ಕಠಿಣ ಲಾಕ್‌ಡೌನ್ ಜಾರಿಯಲ್ಲಿತ್ತು. ಪರಿಣಾಮವಾಗಿ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳೂ ಸ್ಥಗಿತಗೊಂಡಿದ್ದವು.

ಈ ವರ್ಷ ಸೋಂಕಿನ ಪ್ರಮಾಣ ಮತ್ತೆ ತೀವ್ರಗೊಂಡಿದ್ದರಿಂದ ಸ್ಥಳೀಯವಾಗಿ ನಿರ್ಬಂಧಗಳನ್ನು ಹೇರಲಾಗಿದೆ. ರಾಜ್ಯಗಳ ನಡುವಣ ಸರಕುಸಾಗಣೆಗೆ ಈ ವರ್ಷ ಅಡ್ಡಿಯಾಗಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೇ ತಿಂಗಳಲ್ಲಿ ಶೇ 12ರಷ್ಟು ಹೆಚ್ಚು, ಅಂದರೆ 19.9 ಲಕ್ಷ ಟನ್‌ ಪೆಟ್ರೋಲಿಯಂ ಬಳಕೆಯಾಗಿದೆ. ಇದು ಏಪ್ರಿಲ್‌ ತಿಂಗಳಿಗಿಂತ ಶೇ 16 ಮತ್ತು ಕೋವಿಡ್‌ ಪೂರ್ವದ ಬಳಕೆಗಿಂತ ಶೇ 27ರಷ್ಟು ಕಡಿಮೆಯಾಗಿದೆ.

ಡೀಸೆಲ್ ಮಾರಾಟ ವರ್ಷದಿಂದ ವರ್ಷದ ಲೆಕ್ಕಾಚಾರ ಆಧಾರದಲ್ಲಿ 55.3 ಲಕ್ಷ ಟನ್‌ಗೆ ಹೆಚ್ಚಳವಾಗಿದೆ. ಆದರೆ ಏಪ್ರಿಲ್‌ಗೆ ಹೋಲಿಸಿದರೆ ಶೇ 17ರಷ್ಟು ಮತ್ತು ಕೋವಿಡ್‌ ಪೂರ್ವದ ಮಾರಾಟಕ್ಕಿಂತ ಶೇ 29ರಷ್ಟು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT