ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ (2024–25) ಎರಡನೇ ತ್ರೈಮಾಸಿಕದಲ್ಲಿ (ಕ್ಯು2-ಜುಲೈ–ಸೆಪ್ಟೆಂಬರ್) ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದ್ದು, ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಈ ಅವಧಿಯಲ್ಲಿ ದೇಶೀಯ ಆಂತರಿಕ ಉತ್ಪನ್ನ (ಜಿಡಿಪಿ) ಶೇ 5.4ರಷ್ಟು ದಾಖಲಾಗಿದೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಈ ಅಂಕಿ ಅಂಶಗಳುಲ್ಲ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ತಯಾರಿಕಾ ಮತ್ತು ಗಣಿ ವಲಯಗಳ ಪ್ರಗತಿ ಗಣನೀಯವಾಗಿ ಕುಸಿದಿರುವುದು ಹಾಗೂ ಜನರು ಮಾಡುತ್ತಿರುವ ವೆಚ್ಚ ಕಡಿಮೆಯಾಗಿರುವುದು ಬೆಳವಣಿಗೆ ಕುಸಿತಕ್ಕೆ ಕಾರಣ ಎಂದು ಹೇಳಿದೆ.

2022–23ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್–ಡಿಸೆಂಬರ್) ಜಿಡಿಪಿ ಬೆಳವಣಿಗೆಯು ಶೇ 4.3ರಷ್ಟು ದಾಖಲಾಗಿದ್ದು ಈ ಹಿಂದಿನ ಕನಿಷ್ಠ ಮಟ್ಟವಾಗಿತ್ತು.

2023–24ರ ಎರಡನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ 8.1ರಷ್ಟಿತ್ತು. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್–ಜೂನ್) ಶೇ 6.7ರಷ್ಟು ದಾಖಲಾಗಿತ್ತು.

ಜಿಡಿಪಿ ಇಳಿದ್ದರೂ, ಭಾರತ ಈಗಲೂ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಚೀನಾದ ಜಿಡಿಪಿಯು ಶೇ 4.6ರಷ್ಟು ದಾಖಲಾಗಿದೆ.

ವೆಚ್ಚ ಇಳಿಕೆ: ಜನರು ಸರಕು ಮತ್ತು ಸೇವೆಗಳಿಗಾಗಿ ಮಾಡುವ ವೆಚ್ಚವನ್ನು ಸೂಚಿಸುವ ಖಾಸಗಿ ಬಳಕೆ ವೆಚ್ಚದ ಬೆಳವಣಿಗೆಯ ಪ್ರಮಾಣವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 6ಕ್ಕೆ ಇಳಿದಿದೆ. ಈ ವರ್ಷದ ಏಪ್ರಿಲ್–ಜೂನ್ ಅವಧಿಯಲ್ಲಿ ಇದು ಶೇ 7.4ರಷ್ಟಿತ್ತು.

ಎನ್ಎಸ್ಒ ಪ್ರಕಾರ, ಕೃಷಿ ವಲಯದ ಉತ್ಪನ್ನಗಳ ಒಟ್ಟು ಮೌಲ್ಯವರ್ಧನೆಯು (ಜಿವಿಎ) ಎರಡನೇ ತ್ರೈಮಾಸಿಕದಲ್ಲಿ ಶೇ 3.5ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 1.7ರಷ್ಟಿತ್ತು.

ಕುಸಿದ ತಯಾರಿಕಾ ವಲಯ: ಕಳೆದ ವರ್ಷದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ತಯಾರಿಕಾ ವಲಯದ ಜಿವಿಎ ಪ್ರಗತಿ ಶೇ 14.3ರಷ್ಟಿತ್ತು. ಅದು ಈ ವರ್ಷ ಶೇ 2.2ಕ್ಕೆ ಇಳಿಕೆಯಾಗಿದೆ.

ಗಣಿಗಾರಿಕೆ ಮತ್ತು ಕ್ವಾರಿ ವಲಯದ ಜಿವಿಎ ಬೆಳವಣಿಗೆಯು ಶೇ 0.01ಕ್ಕೆ ಕುಸಿತ ಕಂಡಿದ್ದು, ವರ್ಷದ ಹಿಂದೆ ಇದೇ ಅವಧಿಯಲ್ಲಿ ಶೇ 11.1ರಷ್ಟಿತ್ತು.

ವಿದ್ಯುತ್, ಅಡುಗೆ ಅನಿಲ, ನೀರು ಸರಬರಾಜು ಮತ್ತು ಇತರ ದಿನ ಬಳಕೆ ಸೇವೆಗಳ ಪ್ರಗತಿಯು ಶೇ 3.3ರಷ್ಟಿದ್ದು, ವರ್ಷದ ಹಿಂದೆ ಶೇ 10.5ರಷ್ಟಿತ್ತು.

ನಿರ್ಮಾಣ ವಲಯದ ಬೆಳವಣಿಗೆಯೂ ಕುಂಠಿತವಾಗಿದೆ. ಕಳೆದ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ 13.6ರಷ್ಟಿದ್ದರೆ, ಈ ವರ್ಷ ಶೇ 7.7ರಷ್ಟು ದಾಖಲಾಗಿದೆ.

ಕೃಷಿ ಚೇತರಿಕೆ: ಕೃಷಿ ವಲಯದ ಒಟ್ಟು ಮೌಲ್ಯವರ್ಧನೆಯು (ಜಿವಿಎ) ಎರಡನೇ ತ್ರೈಮಾಸಿಕದಲ್ಲಿ ಶೇ 3.5ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 1.7ರಷ್ಟಿತ್ತು.

ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವಾ ಕ್ಷೇತ್ರಗಳ ಜಿವಿಎ ಪ್ರಗತಿಯು ಶೇ 6.7ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಶೇ 6.2ರಷ್ಟಿತ್ತು.

‘2023–24ನೇ ಸಾಲಿನ ಎರಡನೇ ತ್ರೈಮಾಸಿಕದ ವಾಸ್ತವ ಜಿಡಿಪಿ ಅಥವಾ ಹಣದುಬ್ಬರದೊಂದಿಗೆ ಹೊಂದಾಣಿಕೆ ಮಾಡಿಕೊಂಡ ಜಿಡಿಪಿಯ ಮೌಲ್ಯವು ₹41.86 ಲಕ್ಷ ಕೋಟಿ ಇತ್ತು. ಈ ವರ್ಷ ಎರಡನೇ ತ್ರೈಮಾಸಿಕದಲ್ಲಿ ಈ ಮೌಲ್ಯ ₹44.10 ಲಕ್ಷ ಕೋಟಿಯಾಗಿದ್ದು, ಬೆಳವಣಿಗೆ ದರ ಶೇ 5.4ರಷ್ಟು ದಾಖಲಾಗಿದೆ’ ಎಂದು ಎನ್ಎಸ್ಒ ಹೇಳಿಕೆಯಲ್ಲಿ ತಿಳಿಸಿದೆ.

‘ನಾಮಿನಲ್ ಜಿಡಿಪಿ ಅಥವಾ ಪ್ರಸ್ತುತ ಮಾರುಕಟ್ಟೆ ಬೆಲೆಗಳನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಿದ ಜಿಡಿಪಿ ಮೌಲ್ಯವು ಕಳೆದ ವರ್ಷದ ಜುಲೈ– ಸೆಪ್ಟೆಂಬರ್ನಲ್ಲಿ ₹70.90 ಲಕ್ಷ ಕೋಟಿ ಇದ್ದರೆ, ಈ ವರ್ಷ ಇದೇ ಅವಧಿಯಲ್ಲಿ ₹76.60 ಲಕ್ಷ ಕೋಟಿಯಾಗಿದೆ. ಇದರ ಪ್ರಗತಿ ದರ ಶೇ 8ರಷ್ಟು ದಾಖಲಾಗಿದೆ’ ಎಂದು ಅದು ವಿವರಿಸಿದೆ.

ಜಿಡಿಪಿ ಬೆಳವಣಿಗೆ ಶೇ 5.4ಕ್ಕೆ ಕುಸಿದಿರುವುದು ನಿರಾಶಾದಾಯಕ. ಇದರ ನಡುವೆಯೂ ಕೃಷಿ ನಿರ್ಮಾಣ ವಲಯದ ಪ್ರಗತಿಯು ಆಶಾದಾಯಕವಾಗಿದೆ
–ವಿ.ಅನಂತ ನಾಗೇಶ್ವರನ್ ಮುಖ್ಯ ಆರ್ಥಿಕ ಸಲಹೆಗಾರ

‘ನವ ಭಾರತದ ಕಠೋರ ಸತ್ಯ’

ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಕುಸಿದಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹೊಗಳುಭಟರ (ಚಿಯರ್ ಲೀಡರ್ಸ್) ಉತ್ಪ್ರೇಕ್ಷೆಗಿಂತ ದೇಶದ ವಾಸ್ತವ ಸ್ಥಿತಿಯು ಭಿನ್ನವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಟೀಕಿಸಿದೆ.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ‘ಈ ಹಿಂದಿನ ಜಿಡಿಪಿಯ ಹತಾಶ ‘ಮರುಲೆಕ್ಕಾಚಾರಗಳ’ ನಂತರವೂ ಅತಿಮಾನುಷವಲ್ಲದ ಪ್ರಧಾನಿಯ ಆರ್ಥಿಕ ಬೆಳವಣಿಗೆಯ ದಾಖಲೆಯು ಡಾ.ಮನಮೋಹನ್ ಸಿಂಗ್ ಅವರ ಅವಧಿಗೆ ಹೋಲಿಸಿದರೆ ತೀರಾ ಶೋಚನೀಯ ಸ್ಥಿತಿಯಲ್ಲಿಯೇ ಉಳಿದಿದೆ’ ಎಂದು ಹೇಳಿದ್ದಾರೆ. ‘ಇದು ನವ ಭಾರತದ ಕಠೋರ ಸತ್ಯವಾಗಿದೆ’ ಎಂದು ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.