ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆಯಲ್ಲಿ ಸುಧಾರಣೆ, ಲಾಕ್‌ಡೌನ್‌ ನಿರ್ಬಂಧ ಸಡಿಲ: ಚೇತರಿಸಿಕೊಂಡ ತಯಾರಿಕಾ ವಲಯ

Last Updated 2 ಆಗಸ್ಟ್ 2021, 14:42 IST
ಅಕ್ಷರ ಗಾತ್ರ

ನವದೆಹಲಿ: ಬೇಡಿಕೆಯಲ್ಲಿ ಸುಧಾರಣೆ ಕಂಡುಬಂದಿದ್ದು ಮತ್ತು ಸ್ಥಳೀಯವಾಗಿ ಜಾರಿಯಲ್ಲಿದ್ದ ಕೋವಿಡ್ ನಿರ್ಬಂಧಗಳನ್ನು ಕೆಲವು ಕಡೆಗಳಲ್ಲಿ ಸಡಿಲಿಸಿದ ಪರಿಣಾಮವಾಗಿ ದೇಶದ ತಯಾರಿಕಾ ವಲಯದ ಚಟುವಟಿಕೆಯು ಜುಲೈನಲ್ಲಿ ಉತ್ತಮ ಬೆಳವಣಿಗೆ ಕಂಡಿದೆ ಎಂದು ಐಎಚ್‌ಎಸ್ ಮರ್ಕಿಟ್‌ ಇಂಡಿಯಾ ಸಂಸ್ಥೆ ಹೇಳಿದೆ.

ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಜೂನ್‌ನಲ್ಲಿ 48.1ರಷ್ಟು ಇತ್ತು. ಇದು ಜುಲೈನಲ್ಲಿ 55.3ಕ್ಕೆ ಏರಿಕೆ ಆಗಿದೆ. ಮೂರು ತಿಂಗಳಿನಲ್ಲಿ ಅತ್ಯಂತ ವೇಗದ ಬೆಳವಣಿಗೆ ದರ ಇದಾಗಿದೆ ಎಂದು ಸಂಸ್ಥೆ ತಿಳಿಸಿದೆ.

ದೇಶದ ತಯಾರಿಕಾ ವಲಯವು ಜೂನ್‌ನಲ್ಲಿ ಕಂಡಿದ್ದಂತಹ ಇಳಿಕೆಯಿಂದ ಚೇತರಿಸಿಕೊಂಡಿದೆ ಎನ್ನುವುದು ಉತ್ತೇಜನ ನೀಡುವ ಸಂಗತಿ. ಪ್ರತಿ ಮೂರು ಕಂಪನಿಗಳ ಪೈಕಿ ಒಂದು ಕಂಪನಿಯ ತಿಂಗಳ ತಯಾರಿಕೆ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರ ವಿಭಾಗದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ಸಾಂಕ್ರಾಮಿಕ ಹರಡುವಿಕೆಯು ಕಡಿಮೆಯಾಗುತ್ತಾ ಬಂದರೆ 2021ರ ಕ್ಯಾಲೆಂಡರ್ ವರ್ಷಕ್ಕೆ ಕೈಗಾರಿಕಾ ಉತ್ಪಾದನೆಯಲ್ಲಿ ಶೇಕಡ 9.7ರ ಪ್ರಮಾಣದಲ್ಲಿ ವಾರ್ಷಿಕ ಹೆಚ್ಚಳವನ್ನು ತಾವು ನಿರೀಕ್ಷಿಸುವುದಾಗಿ ಅವರು ಹೇಳಿದ್ದಾರೆ.

ಉದ್ಯೋಗಕ್ಕೆ ಸಂಬಂಧಿಸಿದಂತೆ ಜುಲೈನಲ್ಲಿ ಅಲ್ಪ ಏರಿಕೆ ಕಂಡುಬಂದಿದ್ದು, ಸತತ 15 ತಿಂಗಳ ಉದ್ಯೋಗ ನಷ್ಟದಿಂದ ಹೊರಬಂದಂತಾಗಿದೆ.

ಹಣದುಬ್ಬರದ ಪ್ರಮಾಣ ತುಸು ತಗ್ಗಿದ್ದರೂ ತಯಾರಿಕಾ ವೆಚ್ಚವು ಗಣನೀಯವಾಗಿ ಹೆಚ್ಚುತ್ತಿದೆ. ಆದರೆ, ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಹಲವು ಕಂಪನಿಗಳು ತಯಾರಿಕಾ ವೆಚ್ಚದ ಮೇಲಿನ ಹೆಚ್ಚುವರಿ ಹೊರೆಯನ್ನು ತಾವೇ ಭರಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT