ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿಗೊ: ಶೀಘ್ರ ಬ್ಯುಸಿನೆಸ್‌ ಕ್ಲಾಸ್‌ ಸೇವೆ ಆರಂಭ

Published 23 ಮೇ 2024, 16:05 IST
Last Updated 23 ಮೇ 2024, 16:05 IST
ಅಕ್ಷರ ಗಾತ್ರ

ನವದೆಹಲಿ: 18 ವರ್ಷದ ನಂತರ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ತನ್ನ ವಿಮಾನದಲ್ಲಿ ಈ ವರ್ಷದಿಂದ ಬ್ಯುಸಿನೆಸ್‌ ಕ್ಲಾಸ್‌ ಸೇವೆ ಪರಿಚಯಿಸಲಿದೆ.

ಪ್ರಯಾಣಿಕರಿಗೆ ಹೆಚ್ಚಿನ ಅವಕಾಶ ಒದಗಿಸುವ ನಡುವೆಯೇ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಲು ಸಂಸ್ಥೆ ಮುಂದಾಗಿದೆ.

ಪ್ರಸ್ತುತ ಸಂಸ್ಥೆಯ ವಿಮಾನಗಳಲ್ಲಿ ಎಕನಾಮಿಕ್‌ ಕ್ಲಾಸ್‌ ಮಾತ್ರ ಇದೆ. 360ಕ್ಕೂ ಹೆಚ್ಚು ವಿಮಾನಗಳಿದ್ದು, ಇತ್ತೀಚೆಗೆ ಸಂಸ್ಥೆ 30 ವಿಮಾನಗಳನ್ನು ಖರೀದಿಸಿತ್ತು.

ಇದೇ ಆಗಸ್ಟ್‌ಗೆ ಸಂಸ್ಥೆಗೆ 18 ವರ್ಷ ಪೂರ್ಣಗೊಳ್ಳಲಿದೆ. ಆ ವೇಳೆ ಸೇವೆ ಆರಂಭವಾಗುವ ದಿನಾಂಕ, ಮಾರ್ಗ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ತಿಳಿಸಲಾಗುವುದು. ಈ ಸೇವೆಯು ದೇಶದ ಅತ್ಯಂತ ಜನನಿಬಿಡ ಮತ್ತು ವ್ಯಾಪಾರ ಮಾರ್ಗಗಳಲ್ಲಿ ಲಭ್ಯವಿರುತ್ತದೆ ಎಂದು ಸಂಸ್ಥೆ ತಿಳಿಸಿದೆ. 

ಲಾಭ ಹೆಚ್ಚಳ: ಇಂಡಿಗೊ 2023–24ರ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದ ತೆರಿಗೆ ನಂತರದ ಲಾಭವು ದ್ವಿಗುಣಗೊಂಡಿದೆ. 

2022–23ರ ಇದೇ ಅವಧಿಯಲ್ಲಿ ಸಂಸ್ಥೆ ₹919 ಕೋಟಿ ಲಾಭ ಗಳಿಸಿತ್ತು. ಅದು ಈ ಬಾರಿ ₹1,894 ಕೋಟಿಗೆ ಹೆಚ್ಚಳವಾಗಿದೆ. ವರಮಾನವು ₹14,600 ಕೋಟಿಯಿಂದ ₹18,505 ಕೋಟಿಗೆ ಏರಿಕೆಯಾಗಿದೆ.

2023–24ರ ಪೂರ್ಣ ಹಣಕಾಸು ವರ್ಷದಲ್ಲಿ ₹8,200 ಕೋಟಿ ಲಾಭ ಗಳಿಸಿದ್ದರೆ, ಒಟ್ಟು ₹71,200 ಕೋಟಿ ವರಮಾನ ಕಂಡಿದೆ ಎಂದು ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT