ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ₹ 7 ಲಕ್ಷ ಮೀರಿದರೆ ವ್ಯತ್ಯಾಸದ ಮೊತ್ತಕ್ಕಷ್ಟೇ ತೆರಿಗೆ

Last Updated 24 ಮಾರ್ಚ್ 2023, 19:24 IST
ಅಕ್ಷರ ಗಾತ್ರ

ನವದೆಹಲಿ: ಹೊಸ ತೆರಿಗೆ ವ್ಯವಸ್ಥೆಯಲ್ಲಿ ₹ 7 ಲಕ್ಷಕ್ಕಿಂತ ತುಸು ಹೆಚ್ಚಿನ ಆದಾಯ ಪಡೆಯುವವರಿಗೆ ವ್ಯತ್ಯಾಸದ ಮೊತ್ತಕ್ಕಷ್ಟೇ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ.

ಕೇಂದ್ರ ಸರ್ಕಾರವು ಹಣಕಾಸು ಮಸೂದೆ 2023ಅನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದ್ದು, ಅದಕ್ಕೆ ಅನುಮೋದನೆ ಸಿಕ್ಕಿದೆ. ಅದರಲ್ಲಿ ಹೊಸ ತೆರಿಗೆ ವ್ಯವಸ್ಥೆ ಆಯ್ಕೆ ಮಾಡಿಕೊಂಡವರಿಗೆ ತುಸು ಸಮಾಧಾನ ನೀಡುವ ಪ್ರಸ್ತಾವ ಇದೆ.

ಹೊಸ ತೆರಿಗೆ ವ್ಯವಸ್ಥೆಯ ಅಡಿ, ವಾರ್ಷಿಕ ಆದಾಯ ₹ 7 ಲಕ್ಷ ಇದ್ದರೆ ಯಾವುದೇ ತೆರಿಗೆ ಇರುವುದಿಲ್ಲ. ಆದರೆ, ವಾರ್ಷಿಕ ಆದಾಯ ₹ 7,00,100 ಆದಲ್ಲಿ ಆಗ ₹ 25,010 ತೆರಿಗೆ ಪಾವತಿಸಬೇಕಾಗುತ್ತಿತ್ತು. ಅಂದರೆ, ಆದಾಯವು ₹ 100ರಷ್ಟು ಹೆಚ್ಚಾದರೆ ಅದಕ್ಕೆ ₹ 25,010ರಷ್ಟು ತೆರಿಗೆ ಕಟ್ಟಬೇಕಾಗುತ್ತಿತ್ತು!

ಹೀಗಾಗಿ, ವಾರ್ಷಿಕ ಆದಾಯವು ₹ 7ಲಕ್ಷವನ್ನು ಮೀರಿದರೆ ಅದಕ್ಕೆ ವಿಧಿಸುವ ತೆರಿಗೆಯು ವ್ಯತ್ಯಾಸದ ಮೊತ್ತವನ್ನು (ಈ ಉದಾಹರಣೆಯನ್ನು ₹ 100) ಮೀರಬಾರದು ಎನ್ನುವ ಅಂಶವನ್ನು ಹಣಕಾಸು ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ವಾರ್ಷಿಕ ಆದಾಯವು ₹ 7 ಲಕ್ಷಕ್ಕಿಂತ ಎಷ್ಟರವರೆಗೆ ಹೆಚ್ಚಿದ್ದರೆ ಪ್ರಯೋಜನ ಸಿಗಲಿದೆ ಎನ್ನುವ ಬಗ್ಗೆ ಸರ್ಕಾರವು ನಿರ್ದಿಷ್ಟವಾಗಿ ತಿಳಿಸಿಲ್ಲ.

‘₹ 7 ಲಕ್ಷವನ್ನು ಮೀರಿದ ಆದಾಯಕ್ಕೆ ವ್ಯತ್ಯಾಸದ ಮೊತ್ತಕ್ಕಷ್ಟೇ ತೆರಿಗೆ ಕಡಿತ ಮಾಡಲು ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತರಲಾಗಿದೆ. ಇದು ವೈಯಕ್ತಿಕ ತೆರಿಗೆದಾರರಿಗೆ ತುಸು ನೆಮ್ಮದಿ ನೀಡಲಿದೆ’ ಎಂದು ನಂಗಿಯಾ ಆ್ಯಂಡರ್ಸನ್‌ ಎಲ್‌ಎಲ್‌ಪಿನ ಪಾಲುದಾರ ಸಂದೀಪ್ ಜುಂಜುನ್‌ವಾಲಾ ಹೇಳಿದ್ದಾರೆ.

‘ತೆರಿಗೆದಾರರು ವಾರ್ಷಿಕ ಅಂದಾಜು ₹ 7,27,700 ಆದಾಯ ಹೊಂದಿದ್ದರೆ, ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಪ್ರಯೋಜನ ಪಡೆಯಬಹುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT