ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ನಿಷೇಧ ಪರಿಣಾಮ: ಬಂದರಿನಲ್ಲಿಯೇ ಉಳಿದ 2.90 ಲಕ್ಷ ಟನ್‌ ತಾಳೆ ಎಣ್ಣೆ

Last Updated 28 ಏಪ್ರಿಲ್ 2022, 13:06 IST
ಅಕ್ಷರ ಗಾತ್ರ

ಮುಂಬೈ: ಇಂಡೊನೇಷ್ಯಾ ದೇಶವು ತಾಳೆ ಎಣ್ಣೆ ರಫ್ತನ್ನು ‌ನಿಷೇಧಿಸಿರುವ ಕಾರಣದಿಂದಾಗಿ,ಭಾರತಕ್ಕೆ ಬರಬೇಕಿರುವ 2.90 ಲಕ್ಷ ಟನ್‌ ತಾಳೆ ಎಣ್ಣೆಯು ಬಂದರುಗಳಲ್ಲಿಯೇ ಉಳಿಯುವಂತಾಗಿದೆ ಎಂದು ಉದ್ಯಮದ ಅಧಿಕಾರಿಗಳು ಹೇಳಿದ್ದಾರೆ.

16 ಸಾವಿರ ಟನ್‌ನಷ್ಟು ತಾಳೆ ಎಣ್ಣೆ ಇರುವ ಹಡಗು ಇಂಡೊನೇಷ್ಯಾದ ಕುಮೈ ಬಂದರಿನಲ್ಲಿ ಸಿಕ್ಕಿಕೊಂಡಿದೆ ಎಂದು ಜೆಮಿನಿ ಎಡಿಬಲ್ಸ್‌ ಆ್ಯಂಡ್‌ ಫ್ಯಾಟ್ಸ್‌ ಇಂಡಿಯಾ ಪ‍್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಚೌಧರಿ ತಿಳಿಸಿದ್ದಾರೆ. ಕಂಪನಿಯು ಪ್ರತಿ ತಿಂಗಳು ಇಂಡೊನೇಷ್ಯಾದಿಂದ 30 ಸಾವಿರ ಟನ್‌ ತಾಳೆ ಎಣ್ಣೆ ಖರೀದಿಸುತ್ತಿದೆ.

ಇಂಡೊನೇಷ್ಯಾದ ನಿರ್ಧಾರದಿಂದ ಭಾರತದಲ್ಲಿ ತಾಳೆ ಎಣ್ಣೆ ಕೊರತೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ. ಭಾರತವು ತನ್ನ ಪ್ರತಿ ತಿಂಗಳ ದೇಶಿ ಬೇಡಿಕೆಯ ಅರ್ಧದಷ್ಟನ್ನು ಇಂಡೊನೇಷ್ಯಾದಿಂದಲೇ ಆಮದು ಮಾಡಿಕೊಳ್ಳುತ್ತಿದೆ.

ಕಂಪನಿಗಳು ಮಲೇಷ್ಯಾದ ತಾಳೆ ಎಣ್ಣೆ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆದರೆ ಬೇಡಿಕೆ ಪೂರೈಸಲು ಆ ದೇಶಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸನ್‌ವಿನ್‌ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಸಂದೀಪ್‌ ಬಜೋರಿಯಾ ಹೇಳಿದ್ದಾರೆ.

ಮಲೇಷ್ಯಾದ ಮಾರಾಟಗಾರರು ಈಗಾಗಲೇ ಮಾಡಿಕೊಂಡಿರುವ ಪೂರೈಕೆ ಒಪ್ಪಂದ ಈಡೇರಿಸಲು ಬದ್ಧರಾಗಿದ್ದಾರೆ. ಹೊಸ ಬೇಡಿಕೆಯನ್ನು ಪೂರೈಸುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT