ನವದೆಹಲಿ: ಫೆಬ್ರುವರಿ ತಿಂಗಳಲ್ಲಿ ಕೈಗಾರಿಕಾ ಉತ್ಪಾದನಾ ಹೆಚ್ಚಳವು 20 ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಬಿಡುಗಡೆಯಾಗಿರುವ ಈ ಕೊನೆಯ ಅಂಕಿ ಅಂಶಗಳು, ಕೈಗಾರಿಕಾ ಉತ್ಪಾದನೆಯು ಕೇವಲ ಶೇ 0.1ರಷ್ಟು ಬೆಳವಣಿಗೆ ಕಂಡಿರುವುದನ್ನು ಸೂಚಿಸಿವೆ.

ಭಾರಿ ಯಂತ್ರೋಪಕರಣ (–) ಶೇ 8.8 ಮತ್ತು ತಯಾರಿಕಾ ವಲಯವು(–) ಶೇ 0.3ರಷ್ಟು ಕುಸಿತ ಕಂಡಿರುವುದು ಕೈಗಾರಿಕಾ ಉತ್ಪಾದನೆ ಮೇಲೆವ್ಯತಿರಿಕ್ತ ಪರಿಣಾಮ ಬೀರಿವೆ. ಇದಕ್ಕೂ ಹಿಂದೆ 2017ರ ಜೂನ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 0.3ಕ್ಕೆ ಕುಸಿದಿತ್ತು.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (ಐಐಪಿ) ಅಳೆಯಲಾಗುವ ಕಾರ್ಖಾನೆಗಳ ಉತ್ಪಾದನೆಯು 2018ರ ಫೆಬ್ರುವರಿಯಲ್ಲಿ ಶೇ 6.9ರಷ್ಟು ಪ್ರಗತಿ ಸಾಧಿಸಿತ್ತು ಎಂದು ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್ಒ) ತಿಳಿಸಿದೆ.

2018ರ ನವೆಂಬರ್ ತಿಂಗಳ ‘ಐಐಪಿ’ ಪ್ರಗತಿಯನ್ನು ಪರಿಷ್ಕರಿಸಿ ಈ ಮೊದಲಿನ ಶೇ 0.3ರಿಂದ ಶೇ 0.2ಕ್ಕೆ ತಗ್ಗಿಸಲಾಗಿದೆ.

2018–19ರ ಏಪ್ರಿಲ್ – ಫೆಬ್ರುವರಿ ಅವಧಿಯಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 4ರಷ್ಟು ಪ್ರಗತಿ ಕಂಡಿತ್ತು. ಅದಕ್ಕೂ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ 4.3ರಷ್ಟಿತ್ತು.

ತಯಾರಿಕಾ ವಲಯದ ಉತ್ಪಾದನೆ ಕುಸಿದಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ’ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮವು ಸ್ಥಗಿತಗೊಂಡಂತೆ ಕಾಣುತ್ತಿದೆ.

ಹಣದುಬ್ಬರ ಏರಿಕೆ: ಒಂದೆಡೆ ಕೈಗಾರಿಕಾ ಉತ್ಪಾದನೆ ಕುಸಿತ ಕಂಡಿದ್ದರೆ, ಇನ್ನೊಂದೆಡೆ ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ ಮಾರ್ಚ್ ತಿಂಗಳ ಹಣದುಬ್ಬರವು ಶೇ 2.86ಕ್ಕೆ ಏರಿಕೆಯಾಗಿದೆ.

ಇದರಿಂದಾಗಿ, ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ ಇನ್ನೊಂದು ಬಾರಿ ತನ್ನ ಅಲ್ಪಾವಧಿ ಬಡ್ಡಿ ದರ ಕಡಿತ ಮಾಡುವ ಮಾರ್ಗ ಸುಗಮವಾಗಿಲ್ಲ.

‘ಒಳ್ಳೆಯ ದಿನಗಳು’ ಬಂದಿವೆ ಎಂದು ಮತದಾರರನ್ನು ನಂಬಿಸುವುದು ಬಿಜೆಪಿಗೆ ಕಠಿಣವಾಗಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.