ಶುಕ್ರವಾರ, ಏಪ್ರಿಲ್ 10, 2020
19 °C

ಹೆಚ್ಚುವರಿ ತನಿಖೆಗೆ ‘ಸೆಬಿ’ ಸೂಚಿಸಿಲ್ಲ: ಇನ್ಫೊಸಿಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಂಪನಿಯ ಲೆಕ್ಕಪತ್ರಗಳಲ್ಲಿ ಉನ್ನತ ಅಧಿಕಾರಿಗಳು ಅಕ್ರಮಗಳನ್ನು ಎಸಗಿದ್ದಾರೆ ಎಂದು ಅನಾಮಧೇಯ ದೂರುಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ತನಿಖೆ ನಡೆಸಲು ಭಾರತೀಯ ಷೇರು ನಿಯಂತ್ರಣ ಮಂಡಳಿಯು (ಸೆಬಿ) ಸೂಚಿಸಿಲ್ಲ ಎಂದು ಇನ್ಫೊಸಿಸ್‌ ತಿಳಿಸಿದೆ.

ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರಗಳ ದೂರಿಗೆ ಸಂಬಂಧಿಸಿದಂತೆ ತನ್ನ ತನಿಖೆ ಮುಂದುವರೆಸಿರುವ ‘ಸೆಬಿ’, ಲೆಕ್ಕಪತ್ರಗಳ ತಪಾಸಣೆಗೆ ಸಂಬಂಧಿಸಿದಂತೆ ಇನ್ನಷ್ಟು ವಿವರಗಳನ್ನು ಕಲೆಹಾಕಲು (ಫಾರೆನ್ಸಿಕ್‌ ಆಡಿಟ್‌) ಕೇಳಿಕೊಂಡಿದೆ ಎಂದು ವರದಿಯಾಗಿತ್ತು. ಅಂತಹ ಬೆಳವಣಿಗೆಯೇ ನಡೆದಿಲ್ಲ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಸಿಇಒ ಸಲೀಲ್‌ ಪಾರೇಖ್‌ ಮತ್ತು ಸಿಎಫ್‌ಒ ನೀಲಾಂಜನ್‌ ರಾಯ್‌ ಅವರು ಯಾವುದೇ ತಪ್ಪು ಎಸಗದಿರುವುದು ಕಂಪನಿ ನಡೆಸಿದ ಸ್ವತಂತ್ರ ಲೆಕ್ಕಪತ್ರ ತಪಾಸಣೆಯಲ್ಲಿ ಕಂಡು ಬಂದಿದೆ ಎಂದು ಇನ್ಫೊಸಿಸ್‌ ಇತ್ತೀಚೆಗಷ್ಟೇ ತಿಳಿಸಿತ್ತು.

ಷೇರು ಬೆಲೆ ಕುಸಿತ: ಈ ಬೆಳವಣಿಗೆ ಹಿನ್ನೆಲೆಯಲ್ಲಿ, ಶುಕ್ರವಾರದ ವಹಿವಾಟಿನಲ್ಲಿ ಕಂಪನಿಯ ಷೇರು ಬೆಲೆ ಶೇ 1.37ರಷ್ಟು (₹ 773.30) ಕುಸಿತ ದಾಖಲಿಸಿತ್ತು. ದಿನದಂತ್ಯಕ್ಕೆ ಚೇತರಿಸಿಕೊಂಡು ಶೇ 0.20ರಷ್ಟು (₹ 782.95) ಕುಸಿದು ವಹಿವಾಟು ಕೊನೆಗೊಳಿಸಿತ್ತು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು