ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಇಎಫ್‌ನ ಜನಾಂಗೀಯವಾದ ತಡೆ ಒಕ್ಕೂಟ: ಇನ್ಫೊಸಿಸ್ ಮತ್ತು ಟಿಸಿಎಸ್ ಸೇರ್ಪಡೆ

Last Updated 25 ಜನವರಿ 2021, 15:01 IST
ಅಕ್ಷರ ಗಾತ್ರ

ನವದೆಹಲಿ/ದಾವೋಸ್: ಕೆಲಸದ ಸ್ಥಳಗಳಲ್ಲಿ ಜನಾಂಗೀಯವಾದ ತಡೆಯಲು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ಆರಂಭಿಸಿರುವ ಅಂತರರಾಷ್ಟ್ರೀಯ ಒಕ್ಕೂಟವನ್ನು ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಇನ್ಫೊಸಿಸ್‌ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಸೇರಿವೆ.

ಮೈಕ್ರೊಸಾಫ್ಟ್‌, ಫೇಸ್‌ಬುಕ್‌, ಗೂಗಲ್‌ ಮತ್ತು ಬ್ಯಾಂಕ್‌ ಆಫ್‌ ಅಮೆರಿಕ ಸಹ ಈ ಒಕ್ಕೂಟದಲ್ಲಿವೆ.

ದಾವೋಸ್‌ ಅಜೆಂಡಾ ಸಮಿತ್‌ನಲ್ಲಿ ಒಕ್ಕೂಟದ ಆರಂಭವನ್ನು ಘೋಷಿಸಿದ ಡಬ್ಲ್ಯುಇಎಫ್‌, ಕೆಲಸದ ಸ್ಥಳದಲ್ಲಿ ಜನಾಂಗೀಯ ನ್ಯಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದೆ.

ಸಂಸ್ಥಾಪಕ ಸದಸ್ಯರಲ್ಲಿ 13 ಕೈಗಾರಿಕೆಗಳನ್ನು ಪ್ರತಿನಿಧಿಸುವ 48 ಸಂಸ್ಥೆಗಳು ಸೇರಿವೆ. ಇಷ್ಟು ಸಂಸ್ಥೆಗಳು ವಿಶ್ವದಾದ್ಯಂತ 55 ಲಕ್ಷಕ್ಕೂ ಅಧಿಕ ಸಿಬ್ಬಂದಿ ಮತ್ತು ಮೂರು ಖಂಡಗಳಲ್ಲಿ ಮುಖ್ಯ ಕಚೇರಿಗಳನ್ನು ಹೊಂದಿವೆ ಎಂದು ಹೇಳಿದೆ.

ಕಂಪನಿಗಳು ತಮ್ಮ ಆಡಳಿತದ ಕಾರ್ಯಸೂಚಿಯಲ್ಲಿ ಜನಾಂಗೀಯ ನ್ಯಾಯವನ್ನು ಅಳವಡಿಸಿಕೊಳ್ಳಬೇಕು. ಜನಾಂಗೀಯ ತಾರತಮ್ಯ ವಿರೋಧಿ ಸಂಘಟನೆಯಾಗುವ ನಿಟ್ಟಿನಲ್ಲಿ ಒಂದು ದೃಢ ನಿರ್ಧಾರ ಮತ್ತು ದೀರ್ಘಾವಧಿಯ ಕಾರ್ಯಯೋಜನೆ ರೂಪಿಸಬೇಕು ಎಂದು ಅದು ಹೇಳಿದೆ.

500 ಫಾರ್ಚೂನ್ ಕಂಪನಿಗಳಲ್ಲಿ ಶೇ 1ರಷ್ಟರಲ್ಲಿ ಮಾತ್ರವೇ ಕಪ್ಪು ವರ್ಣಕ್ಕೆ ಸೇರಿದವರು ಸಿಇಒ ಆಗಿದ್ದಾರೆ. ಇವರ ಪ್ರಾತಿನಿಧ್ಯ ಹೆಚ್ಚಿಸುವ ತುರ್ತು ಅಗತ್ಯವಿದೆ’ ಎಂದು ಡಬ್ಲ್ಯುಇಎಫ್‌ನ ವ್ಯವಸ್ಥಾಪಕ ನಿರ್ದೇಶಕ ಸಾದಿಯಾ ಜಹಿದಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT