ಬೆಂಗಳೂರು: ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್ ಲಿಮಿಟೆಡ್ (ಜಿಆರ್ಎಸ್ಇ) ತನ್ನ ಸುಧಾರಿತ ಮಾರ್ಗದರ್ಶಿ ಕ್ಷಿಪಣಿ ಯುದ್ಧ ನೌಕೆ ‘ಹಿಮಗಿರಿ’ ಅನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದೆ.

ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 17ಎ ಅಡಿಯಲ್ಲಿ ಜಿಆರ್ಎಸ್ಇ ನಿರ್ಮಿಸುತ್ತಿರುವ ಮೂರು ಯುದ್ಧ ನೌಕೆಗಳಲ್ಲಿ ‘ಹಿಮಗಿರಿ’ಯು ಮೊದಲನೆಯದ್ದಾಗಿದೆ.

ಹಿಮಗಿರಿ ಜಿಆರ್ಎಸ್ಇ ನಿರ್ಮಿಸಿ ಪೂರೈಸುತ್ತಿರುವ 801ನೇ ಹಡಗು. ಇವುಗಳಲ್ಲಿ 112 ಯುದ್ಧನೌಕೆಗಳಿವೆ. 149 ಮೀಟರ್ ಉದ್ದ, 6,670 ಟನ್ ತೂಕವನ್ನು ಹೊಂದಿವೆ. ಈ ಮೂರು ಹಡಗುಗಳ ಮೌಲ್ಯ ₹21,833 ಕೋಟಿಗೂ ಹೆಚ್ಚಾಗಿದೆ.

ಈ ಯುದ್ಧನೌಕೆಯನ್ನು ಭಾರತೀಯ ನೌಕಾಪಡೆಯ ಪರವಾಗಿ ಪೂರ್ವ ನೌಕಾ ಕಮಾಂಡ್ನ ಮುಖ್ಯ ಸಿಬ್ಬಂದಿ ಅಧಿಕಾರಿ (ತಾಂತ್ರಿಕ) ರಿಯರ್ ಅಡ್ಮಿರಲ್ ರವೀಶ್ ಸೇಠ್ ಅವರು ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.