ಬೆಂಗಳೂರು: ತೆಂಗು ಅಭಿವೃದ್ಧಿ ಮಂಡಳಿಯು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಜೊತೆಗೂಡಿ, ತೆಂಗಿನ ಮರ ಹತ್ತುವವರಿಗೆ ವಿಮಾ ಸೌಲಭ್ಯ ಜಾರಿಗೆ ತಂದಿದೆ. ಇದರ ಅಡಿ ಅಪಘಾತ ಮತ್ತು ಸಾವಿಗೆ ₹ 5 ಲಕ್ಷದವರೆಗೆ ವಿಮಾ ರಕ್ಷೆ ಇರುತ್ತದೆ.

ಆಸ್ಪತ್ರೆಗೆ ದಾಖಲಾದರೆ ₹ 1 ಲಕ್ಷದವರೆಗೆ ನೆರವು ಸಿಗುತ್ತದೆ. ಮಂಡಳಿಯು ತನ್ನ ‘ಫ್ರೆಂಡ್ಸ್ ಆಫ್ ಕೊಕೊನಟ್ ಟ್ರೀ’ ಮತ್ತು ನೀರಾ ತಂತ್ರಜ್ಞ ತರಬೇತಿ ಯೋಜನೆಗಳ ಅಡಿ ತರಬೇತಿ ಪಡೆಯುತ್ತಿರುವವರಿಗೆ ಒಂದು ವರ್ಷದ ಅವಧಿಗೆ ವಿಮಾ ಸೌಲಭ್ಯವನ್ನು ಉಚಿತವಾಗಿ ಒದಗಿಸಲಿದೆ.

ವಿಮೆಯ ವಾರ್ಷಿಕ ಪ್ರೀಮಿಯಂ ಮೊತ್ತ ₹ 375. ಇದರಲ್ಲಿ ₹ 281ನ್ನು ಮಂಡಳಿ ಪಾವತಿಸಲಿದೆ. ಇನ್ನುಳಿದ ₹ 94ನ್ನು ಮಾತ್ರ ವಿಮೆ ಪಡೆಯುವವರು ಪಾವತಿಸಬೇಕು. ತೆಂಗಿನ ಮರ ಹತ್ತುವ ಕೆಲಸದಲ್ಲಿ ತೊಡಗಿಸಿಕೊಂಡಿರುವ, 18ರಿಂದ 65 ವರ್ಷ ವಯಸ್ಸಿನೊಳಗಿನವರು ಕೂಡ ವಿಮೆ ಪಡೆಯಲು ₹ 94 ಪಾವತಿಸಿದರೆ ಸಾಕು.

ಈ ಮೊತ್ತವನ್ನು ಆನ್ಲೈನ್ ಮೂಲಕ ಪಾವತಿಸಬಹುದು ಅಥವಾ ಕೊಕೊನಟ್ ಡೆವಲಪ್ಮೆಂಟ್ ಬೋರ್ಡ್, ಎರ್ನಾಕುಲಂ ಹೆಸರಿನಲ್ಲಿ ಡಿ.ಡಿ. ಮೂಲಕ ಪಾವತಿಸಬಹುದು. ಹೆಚ್ಚಿನ ವಿವರಗಳಿಗೆ 0484-2377266 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಅಥವಾ www.coconutboard.gov.in ವೆಬ್ಸೈಟ್ಗೆ ಭೇಟಿ ಕೊಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.