ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್ ತ್ರೈಮಾಸಿಕ: ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ಗೆ ₹12,967 ಕೋಟಿ ಲಾಭ

Published 31 ಅಕ್ಟೋಬರ್ 2023, 11:01 IST
Last Updated 31 ಅಕ್ಟೋಬರ್ 2023, 11:01 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ (ಐಒಸಿ), ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹12,967 ಕೋಟಿಯಷ್ಟು ಲಾಭ ಗಳಿಸಿದೆ. 2022ರ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ₹272 ಕೋಟಿಯಷ್ಟು ನಷ್ಟ ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ಕಚ್ಚಾ ತೈಲ ದರ ಇಳಿಕೆಗೆ ಅನುಗುಣವಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹೆಚ್ಚಳ ಮಾಡದೇ ಇರುವುದರಿಂದ ಕಂಪನಿಗೆ ಈ ಪ್ರಮಾಣದ ಲಾಭ ಆಗಿದೆ. ಆದರೆ, ಕಳೆದ ವರ್ಷ ಕಚ್ಚಾ ತೈಲ ದರ ಗರಿಷ್ಠ ಮಟ್ಟದಲ್ಲಿ ಇದ್ದಾಗ ಇಂಧನ ದರ ಹೆಚ್ಚಿಸಿರಲಿಲ್ಲ. ಹೀಗಾಗಿ ಆಗ ಆಗಿದ್ದ ನಷ್ಟವನ್ನು ತುಂಬಿಕೊಳ್ಳಲಾಗಿದೆ ಎಂದು ಕಂಪನಿಯು ತಿಳಿಸಿದೆ.

2022ರ ಏಪ್ರಿಲ್‌–ಮಾರ್ಚ್‌ ಅವಧಿಯಲ್ಲಿ ಕಂಪನಿಯು ₹2,265 ಕೋಟಿಯಷ್ಟು ನಷ್ಟ ಅನುಭವಿಸಿತ್ತು. 2023ರ ಏಪ್ರಿಲ್‌–ಮಾರ್ಚ್‌ ಅವಧಿಯಲ್ಲಿ ದಾಖಲೆಯ ₹26,718 ಕೋಟಿಯಷ್ಟು ಲಾಭ ಗಳಿಸಿದೆ. ಇದು 2021–22ರಲ್ಲಿ ಕಂಡಿದ್ದ ₹24,184 ಕೋಟಿ ಲಾಭಕ್ಕಿಂತಲೂ ಹೆಚ್ಚಿನದ್ದಾಗಿದೆ. 

ಕಂಪನಿಯ ವರಮಾನವು ₹2.28 ಲಕ್ಷ ಕೋಟಿಯಿಂದ ₹2.02 ಲಕ್ಷ ಕೋಟಿಗೆ ಇಳಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹5 ಮಧ್ಯಂತರ ಲಾಭಾಂಶವನ್ನು ನಿರ್ದೇಶಕರ ಮಂಡಳಿ ಘೋಷಿಸಿರುವುದಾಗಿ ಕಂಪನಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT