ಮಂಗಳವಾರ, ಜನವರಿ 25, 2022
24 °C

ಪ್ಯಾನ್‌ ಸಂಖ್ಯೆ ಅಪ್ಡೇಟ್‌ ಮಾಡಲು ಎಲ್‌ಐಸಿ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಐಪಿಒಗೆ ಸಜ್ಜಾಗುತ್ತಿರುವ ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ತನ್ನ ವಿಮಾ ಗ್ರಾಹಕರಿಗೆ ಪ್ಯಾನ್‌ ಸಂಖ್ಯೆ ಅಪ್ಡೇಟ್ ಮಾಡುವಂತೆ ತಿಳಿಸಿದೆ. ಇದರಿಂದಾಗಿ ಎಲ್‌ಐಸಿ ವಿಮೆ ಹೊಂದಿರುವವರಿಗೆ ಐಪಿಒ ಪ್ರಕ್ರಿಯೆಯಲ್ಲಿ ಮೀಸಲು ಕೋಟಾ ಅಡಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ.

ನಿಗಮವು ಐಪಿಒ ಮೂಲಕ ಮಾರಾಟ ಮಾಡಲಿರುವ ಷೇರುಗಳಲ್ಲಿ ಶೇಕಡ 10ರವರೆಗೆ ಷೇರುಗಳನ್ನು ವಿಮೆ ಹೊಂದಿರುವವರಿಗೆ ಮೀಸಲು ಇರಿಸಲಾಗುತ್ತದೆ. ಡಿಮ್ಯಾಟ್ ಖಾತೆ ಹೊಂದಿಲ್ಲದವರು, ತಮ್ಮದೇ ಖರ್ಚಿನಲ್ಲಿ ಡಿಮ್ಯಾಟ್ ಖಾತೆ ತೆರೆಯಬಹುದು ಎಂದು ಕೂಡ ಎಲ್‌ಐಸಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು