ನವದೆಹಲಿ: ಇಸ್ರೇಲ್ನ ವಿಮಾನ ನಿಲ್ದಾಣದ ಸಮೀಪ ಕ್ಷಿಪಣಿ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಟೆಲ್ ಅವಿವ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಅಬುಧಾಬಿಗೆ ಮಾರ್ಗ ಬದಲಿಸಿದೆ ಎಂದು ಮೂಲಗಳು ಇಂದು (ಭಾನುವಾರ) ತಿಳಿಸಿವೆ.

ಏರ್ ಇಂಡಿಯಾದ ಬೋಯಿಂಗ್ 787 ವಿಮಾನವು, ಟೆಲ್ ಅವಿವ್ನಲ್ಲಿ ಇಳಿಯಲು ಇನ್ನೇನು ಒಂದು ತಾಸಿಗೂ ಕಡಿಮೆ ಅವಧಿ ಇದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ಪ್ರಸ್ತುತ ಎಐ 139 ವಿಮಾನವು ದೆಹಲಿಗೆ ಹಿಂತಿರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನಗಳ ಟ್ರ್ಯಾಕಿಂಗ್ ವೆಬ್ಸೈಟ್ ಆದ Flightradar24.com ಪರಿಶೀಲಿಸಿದಾಗ ಈ ವಿಮಾನವು ಅಬುಧಾಬಿಗೆ ಮಾರ್ಗ ಬದಲಿಸುವಾಗ ಜೋರ್ಡನ್ನ ವಾಯುಪ್ರದೇಶದಲ್ಲಿತ್ತು.

ಮತ್ತೊಂದೆಡೆ ಟೆಲ್ ಅವಿವ್ನಿಂದ ದೆಹಲಿಯತ್ತ ಇಂದು ಪ್ರಯಾಣಿಸಬೇಕಿದ್ದ ವಿಮಾನವನ್ನು ರದ್ದುಗೊಳಿಸಲಾಗಿದೆ.

ಯೆಮನ್ ಉಡಾಯಿಸಿದ ಕ್ಷಿಪಣಿ ಟೆಲ್ ಅವಿವ್ ವಿಮಾನ ನಿಲ್ದಾಣದ ಸಮೀಪ ಅಪ್ಪಳಿಸಿದ ಪರಿಣಾಮ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಧಗಿತಗೊಳಿಸಲಾಗಿದೆ.
.ಗಾಲಿಕುರ್ಚಿ ಒದಗಿಸದ ಸಿಬ್ಬಂದಿ: ಏರ್ ಇಂಡಿಯಾ ವಿರುದ್ಧ ನಟ ವೀರ್ ದಾಸ್ ಕಿಡಿ.ದೆಹಲಿ: ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ಪೈಲಟ್ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.