ನವದೆಹಲಿ: ಜನಧನ ಯೋಜನೆಯ ಅಡಿಯಲ್ಲಿ ತೆರೆಯಲಾದ 15 ಕೋಟಿ ಖಾತೆಗಳು ನಿಷ್ಕ್ರಿಯವಾಗಿವೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಸೋಮವಾರ ಮಾಹಿತಿ ನೀಡಿದ್ದಾರೆ.

ಈ ಯೋಜನೆಯ ಅಡಿ ಒಟ್ಟು 57.07 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಈ ಪೈಕಿ ಶೇ 26ರಷ್ಟು ಖಾತೆಗಳು ನಿಷ್ಕ್ರಿಯವಾಗಿವೆ.

ಈ ವರ್ಷದ ಸೆಪ್ಟೆಂಬರ್ 30ರ ವೇಳೆಗೆ ದೇಶದ ಬ್ಯಾಂಕ್ಗಳು ಒಟ್ಟು 7.81 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಗಳನ್ನು ಹೊಂದಿದ್ದವು, ಇವುಗಳ ಮೂಲಕ ನೀಡಿರುವ ಸಾಲದಲ್ಲಿ ಒಟ್ಟು ₹10.39 ಲಕ್ಷ ಕೋಟಿ ಅವುಗಳಿಗೆ ಬರಬೇಕಿದೆ ಎಂದು ಬೇರೊಂದು ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಚೌಧರಿ ತಿಳಿಸಿದ್ದಾರೆ.

ಸ್ಟ್ಯಾಂಡ್–ಅಪ್ ಇಂಡಿಯಾ ಯೋಜನೆಯ ಅಡಿಯಲ್ಲಿ ಬ್ಯಾಂಕ್ಗಳು ಒಟ್ಟು ₹62,791 ಕೋಟಿ ಮೊತ್ತದ 2.75 ಲಕ್ಷ ಸಾಲಗಳನ್ನು ನೀಡಿವೆ.

ವಹಿವಾಟಿನ ಗಾತ್ರದ ಆಧಾರದಲ್ಲಿ ಭಾರತದ ಯುಪಿಐ ವ್ಯವಸ್ಥೆಯು ಜಗತ್ತಿನ ಅತಿದೊಡ್ಡ ರಿಟೇಲ್ ತ್ವರಿತ ಪಾವತಿ ವ್ಯವಸ್ಥೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಹೇಳಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.