ದೋಹಾ: ಭಾರತದ ಶೂಟರ್ಗಳು ಇಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್ ಫೈನಲ್ನಲ್ಲಿ ಎರಡು ಚಿನ್ನ ಸೇರಿದಂತೆ ಆರು ಪದಕಗಳೊಂದಿಗೆ ತನ್ನ ಅತ್ಯುತ್ತಮ ಅಭಿಯಾನವನ್ನು ಮುಗಿಸಿದರು.

ಕೊನೆಯ ದಿನವಾದ ಸೋಮವಾರ ಪುರುಷರ ಟ್ರ್ಯಾಪ್ ಫೈನಲ್ನಲ್ಲಿ ವಿಶ್ವ ಚಾಂಪಿಯನ್ಷಿಪ್ ಕಂಚು ವಿಜೇತ ಜೊರಾವರ್ ಸಿಂಗ್ ಸಂಧು ಏಳನೇ ಸ್ಥಾನ ಪಡೆದರು. ಅಂತಿಮ ದಿನದ ಶಾಟ್ಗನ್ ಸ್ಪರ್ಧೆಯಲ್ಲಿದ್ದ ಭಾರತದ ಏಕೈಕ ಶೂಟರ್ ಅವರಾಗಿದ್ದರು.

ಅರ್ಹತಾ ಸುತ್ತಿನಲ್ಲಿ 125ರಲ್ಲಿ 119 ಅಂಕ ಪಡೆದಿದ್ದ ಜೊರಾವರ್ ಅವರು ಆರನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು. ಐಎಸ್ಎಸ್ಎಫ್ ಹೊಸ ನಿಯಮಗಳ ಪ್ರಕಾರ ಆರು ಶೂಟರ್ಗಳ ಬದಲಿಗೆ ಈ ಬಾರಿ ಎಂಟು ಮಂದಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದರು.

30 ಶಾಟ್ಗಳ ಫೈನಲ್ನಲ್ಲಿ ಲಯ ತಪ್ಪಿದ ಜೊರಾವರ್ 7 ಅಂಕ ಸಂಪಾದಿಸಲಷ್ಟೇ ಶಕ್ತವಾದರು. ಅಮೆರಿಕದ ಹಿಂಟನ್ ವಿಲಿಯಂ (29) ಚಿನ್ನ ಗೆದ್ದರೆ, ಗ್ವಾಟೆಮಾಲಾದ ಬ್ರೋಲ್ ಕಾರ್ಡೆನಾಸ್ ಜೀನ್ ಪಿಯರೆ (28) ಬೆಳ್ಳಿ ಜಯಿಸಿದರು. ಅಮೆರಿಕದ ಮತ್ತೊಬ್ಬ ಶೂಟರ್ ಎಲ್ಲರ್ ವಾಲ್ಟನ್ (23) ಕಂಚು ತಮ್ಮದಾಗಿಸಿಕೊಂಡರು.

ನಾಲ್ಕು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ ಗೆದ್ದ ಚೀನಾ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಎರಡು ಚಿನ್ನ, ಮೂರು ಬೆಳ್ಳಿ, ಒಂದು ಕಂಚಿನ ಪದಕಗಳೊಂದಿಗೆ ಭಾರತ ಎರಡನೇ ಸ್ಥಾನ ಗಳಿಸಿತು. ಕೊನೆಯ ದಿನ ಪುರುಷರ ಟ್ರ್ಯಾಪ್ ಮತ್ತು ಸ್ಕೀಟ್ನಲ್ಲಿ ಡಬಲ್ ಚಿನ್ನ ಗೆದ್ದ ಅಮೆರಿಕ (6 ಪದಕ) ಮೂರನೇ ಸ್ಥಾನ ಗಳಿಸಿತು.

ಮಹಿಳೆಯರ 25 ಮೀ. ಪಿಸ್ತೂಲ್ನಲ್ಲಿ ಸಿಮ್ರನ್ಪ್ರೀತ್ ಕೌರ್ ಬ್ರಾರ್ ಮತ್ತು 10 ಮೀ. ಏರ್ ಪಿಸ್ತೂಲ್ನಲ್ಲಿ ಸುರುಚಿ ಫೋಗಟ್ ತಲಾ ಚಿನ್ನದ ಪದಕ ಗೆದ್ದಿದ್ದು ಕೂಟದಲ್ಲಿ ಭಾರತದ ಪ್ರಮುಖ ಸಾಧನೆಯಾಗಿದೆ. ಮಹಿಳೆಯರ 10 ಮೀ. ಏರ್ ಪಿಸ್ತೂಲ್ನಲ್ಲಿ ಸೈನ್ಯಮ್, ಪುರುಷರ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ನಲ್ಲಿ ಅನೀಶ್ ಭಾನವಾಲಾ, 50 ಮೀ. ರೈಫಲ್ 3 ಪೊಸಿಷನ್ಗಳಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಬೆಳ್ಳಿ ಸಾಧನೆ ಮಾಡಿದ್ದಾರೆ. 10 ಮೀ.ಏರ್ ಪಿಸ್ತೂಲ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಸಾಮ್ರಾಟ್ ರಾಣಾ ಕಂಚಿನ ಪದಕ ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.