ಮುಂಬೈ: ನಷ್ಟದಲ್ಲಿರುವ ಜೆಟ್‌ಏರ್‌ವೇಸ್ ಸಂಸ್ಥೆಯನ್ನು ಖರೀದಿಸುವ ಆಸಕ್ತಿ ತಿಳಿಸಲು ನೀಡಲಾಗಿದ್ದು ಗಡುವನ್ನು ಆಗಸ್ಟ್ 3ರಿಂದ ಆಗಸ್ಟ್ 10ಕ್ಕೆ ವಿಸ್ತರಿಸಲಾಗಿದೆ.

ದಿವಾಳಿ ಪ್ರಕ್ರಿಯೆ ನಡೆಸಲು26 ಬ್ಯಾಂಕ್‌ಗಳ ಒಕ್ಕೂಟದಿಂದ ನೆಮಕಗೊಂಡಿರುವ ಗ್ರ್ಯಾಂಟ್ ಥಾರ್ನ್‌ಟನ್ ಕಂಪನಿಯಆಶಿಶ್‌ಚೌಚರಿಯಾ ಈ ಮೊದಲು ಆಗಸ್ಟ್ 3ರ ಗಡುವು ನೀಡಿದ್ದರು.

ಇಲ್ಲಿಯವರೆಗೆ ಖರೀದಿಸುವ ಆಸಕ್ತಿ ವ್ಯಕ್ತಪಡಿಸಿ ನಾಲ್ಕು ಅರ್ಜಿಗಳು ಸಂಸ್ಥೆಯ ಜಾಲತಾಣದಲ್ಲಿ ಸಲ್ಲಿಕೆಯಾಗಿವೆ. ಈ ಅರ್ಜಿದಾರರು ಹೆಚ್ಚುವರಿ ಸಮಯ ನೀಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಒಕ್ಕೂಟವು ಷೇರುಪೇಟೆಗೆ ಮಾಹಿತಿ ನೀಡಿದೆ.

₹ 8,500 ಕೋಟಿ ಸಾಲ ವಸೂಲಿಗಾಗಿ ಒಕ್ಕೂಟವು ಸಂಸ್ಥೆಯನ್ನು ಎನ್‌ಸಿಎಲ್‌ಟಿಯಡಿ ದಿವಾಳಿ ಪ್ರಕ್ರಿಯೆಗೆ ಒಳಪಡಿಸಿದೆ.

ಸಿಬ್ಬಂದಿಯ ವೇತನದ ಬಗ್ಗೆ ಪರಿಶೀಲನೆ ನಡೆಸುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ಪ್ರಾಧಿಕಾರ (ಎನ್‌ಸಿಎಲ್‌ಟಿ) ಜುಲೈ 23ರಂದು ಸೂಚನೆ ನೀಡಿತ್ತು. ಹೀಗಾಗಿಎಸ್‌ಬಿಐ ಈಗಾಗಲೇ ₹ 10 ಕೋಟಿ ಮಧ್ಯಂತರ ಹಣಕಾಸಿನ ನೆರವು ನೀಡಲು ಒಪ್ಪಿಗೆ ನೀಡಿದೆ. ಇನ್ನುಳಿದ ಬ್ಯಾಂಕ್‌ಗಳು ಸಹ ನೆರವು ನೀಡುವ ಪ್ರಕ್ರಿಯೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.