ಮಂಗಳವಾರ, ಆಗಸ್ಟ್ 3, 2021
20 °C

ವೇತನ ಬಾಕಿ: ಎಸ್‌ಬಿಐಗೆ ಪತ್ರ ಬರೆದಜೆಟ್‌ ಏರ್‌ವೇಸ್‌ ಪೈಲಟ್‌ಗಳು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ವೇತನ ಬಾಕಿ ವಿಷಯವಾಗಿ ಜೆಟ್‌ ಏರ್‌ವೇಸ್‌ನ ದೇಶಿ ಪೈಲಟ್‌ಗಳ ಅಂಗಸಂಸ್ಥೆ ‘ನ್ಯಾಷನಲ್‌ ಏವಿಯೇಟರ್ಸ್‌ ಗೈಡ್’ (ಎನ್‌ಎಜಿ), ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಅವರಿಗೆ ಇಮೇಲ್‌ ಬರೆದಿದೆ.

ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಸಂಸ್ಥೆಯನ್ನು ನಿಯಂತ್ರಣಕ್ಕೆ ಪಡೆದ ನಂತರದ ದಿನವೇ ಪೈಲಟ್‌ಗಳು ರಜನೀಶ್‌ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

‘ಹೊಸ ಆಡಳಿತ ಮಂಡಳಿಯು ವಿಳಂಬ ಮಾಡದೇ ಆದಷ್ಟೂ ಬೇಗ ಬಾಕಿ ವೇತನ ಪಾವತಿಸುವ ಮೂಲಕ ಪೈಲಟ್‌ಗಳು ಮತ್ತು ಎಂಜಿನಿ
ಯರ್‌ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ನಾವು ಮನವಿ ಮಾಡಿಕೊಳ್ಳುತ್ತೇವೆ’ ಎಂದು ಎನ್‌ಎಜಿ ಪ್ರಧಾನ ಕಾರ್ಯದರ್ಶಿ ತೇಜ್‌ ಸೂದ್‌ ಅವರು ಎಸ್‌ಬಿಐ ಅಧ್ಯಕ್ಷರಿಗೆ ಕಳುಹಿಸಿರುವ ಇ–ಮೇಲ್‌ನಲ್ಲಿ ಬರೆದಿದ್ದಾರೆ.

ಜೆಟ್‌ ಏರ್‌ವೇಸ್‌ ಪುನಶ್ಚೇತನಕ್ಕೆ ನಿರ್ಧರಿಸಿರುವ ಎಸ್‌ಬಿಐಗೆ ಧನ್ಯವಾದ ಸೂಚಿಸಿರುವ ಅವರು, ಪುನಶ್ಚೇತನದ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ಭೇಟಿಗೆ ಅವಕಾಶ ನೀಡಿದರೆ ಅದರಿಂದ ನಮ್ಮಲ್ಲಿರುವ ಅನಿಶ್ಚಿತತೆ ದೂರಾಗಿ ನಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ’ ಎಂದಿದ್ದಾರೆ.

ಸಂಸ್ಥೆಯಲ್ಲಿ ಒಟ್ಟಾರೆ 1,600 ಪೈಲಟ್‌ಗಳಿದ್ದು, ಅವರಲ್ಲಿ 1,100 ಪೈಲಟ್‌ಗಳು ‘ಎನ್‌ಎಜಿ’ದಲ್ಲಿದ್ದಾರೆ. ಮಾರ್ಚ್‌ ಒಳಗಾಗಿ ವೇತನ ಪಾವತಿಸದೇ ಇದ್ದರೆ ಏಪ್ರಿಲ್‌ 1 ರಿಂದ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಎನ್‌ಎಜಿನಲ್ಲಿ ಇರುವ ಪೈಲಟ್‌ಗಳಲ್ಲಿ ಬಹಳಷ್ಟು ಮಂದಿಗೆ ಇಂಡಿಗೊ ಮತ್ತು ಸ್ಪೈಸ್‌ಜೆಟ್‌ ಸಂಸ್ಥೆಗಳು ಕೆಲಸಕ್ಕಾಗಿ ಆಹ್ವಾನಿಸಿವೆ ಎನ್ನುವ ವರದಿಯೂ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು