ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೊ ಹೊಸ ಪ್ಲಾನ್‌; ಏರ್‌ಟೆಲ್‌, ವೊಡಾಫೋನ್‌ಗಿಂತ ಶೇ 20ರಷ್ಟು ಅಗ್ಗ?

Last Updated 3 ಡಿಸೆಂಬರ್ 2019, 13:17 IST
ಅಕ್ಷರ ಗಾತ್ರ

ದೂರಸಂಪರ್ಕ ಕಂಪನಿಗಳು ಶೇ 40ರಷ್ಟು ಸೇವಾ ದರ ಹೆಚ್ಚಿಸಿರುವ ಬಗ್ಗೆ ಈಗಾಗಲೇ ಘೋಷಿಸಿವೆ. ಆದರೆ, ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ನಿಗದಿ ಪಡಿಸಿರುವ ದರಕ್ಕಿಂತಲೂ ಜಿಯೊ ಶೇ 15–20ರಷ್ಟು ಕಡಿಮೆ ದರದಲ್ಲಿ ಬಳಕೆದಾರರಿಗೆ ರಿಚಾರ್ಜ್‌ ಆಯ್ಕೆಗಳು ಸಿಗಲಿವೆ ಎಂದು ವರದಿಯಾಗಿದೆ.

ಈಗಾಗಲೇ ಏರ್‌ಟೆಲ್‌ ಮತ್ತು ವೊಡಾಫೋನ್‌ ಸೇವಾ ದರ ಪರಿಷ್ಕೃತಗೊಳಿಸಿದ ಪ್ಲಾನ್‌ಗಳನ್ನು ಪ್ರಕಟಿಸಿದ್ದು, ಜಿಯೊ ಡಿಸೆಂಬರ್‌ 6ರಂದು ಯೋಜನೆ ಬಹಿರಂಗ ಪಡಿಸುವುದಾಗಿ ಹೇಳಿದೆ. ಜಿಯೊ ಸಹ ಶೇ 40ರಷ್ಟು ಸೇವಾ ದರ ಹೆಚ್ಚಿಸುವುದಾಗಿ ತಿಳಿಸಿದ್ದರೂ 'ಆಲ್‌ ಇನ್‌ ಒನ್‌' ಪ್ಲಾನ್‌ ಮೂಲಕ ಅನಿಯಮಿತ ಕರೆ ಮತ್ತು ಡೇಟಾ ಸೇವೆ ನೀಡುವುದಾಗಿ ಪ್ರಕಟಿಸಿದೆ. ಹೊಸ ಆಲ್‌ ಇನ್‌ ಒನ್‌ನಲ್ಲಿ ಹಿಂದಿನ ಯೋಜನೆಗಳಿಗಿಂತ ಶೇ 300ರಷ್ಟು ಹೆಚ್ಚುವರಿ ಲಾಭ ಸಿಗಲಿದೆ ಎಂದಿದೆ.

'ಜಿಯೊ ಅಯ್ದ ಯೋಜನೆಗಳ ಮೇಲೆ ಶೇ 40ರಷ್ಟು ಹೆಚ್ಚಳ ಮಾಡಲಿದ್ದು, ಜನಪ್ರಿಯವಾಗಿರುವ ಪ್ಲಾನ್‌ಗಳಲ್ಲಿ ಶೇ 25–30ರಷ್ಟು ದರ ಏರಿಕೆ ಮಾಡಬಹುದು. ಹೆಚ್ಚುವರಿ ಡೇಟಾ ಸೌಲಭ್ಯ ನೀಡುವುದೇ ಜಿಯೊ ಹೇಳುತ್ತಿರುವ ಶೇ 300ರಷ್ಟು ಹೆಚ್ಚುವರಿ ಲಾಭ ಇರಬಹುದು' ಎಂದು ಬ್ಯಾಂಕ್‌ ಆಫ್‌ ಅಮೆರಿಕದ ಮೆರಿಲ್‌ ಲಿಂಚ್‌ ಅಭಿಪ್ರಾಯ ಪಟ್ಟಿದ್ದಾರೆ.

ಸೇವಾ ದರ ಹೆಚ್ಚಳದ ನಂತರವೂ ಜಿಯೊ ಇತರೆ ದೂರಸಂಪರ್ಕ ಕಂಪನಿಗಳ ದರಗಳಿಗಿಂತ ಶೇ 15–20ರಷ್ಟು ಅಗ್ಗವಾಗಿಯೇ ಮುಂದುವರಿಯಲಿದೆ. ಡೇಟಾ ಬಳಕೆ ಅವಕಾಶದ ಮಿತಿಯ ಬಗ್ಗೆ ಜಿಯೊ ವಹಿಸಿರುವ ಕ್ರಮಗಳು ಹೂಡಿಕೆ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.

ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾದ ಹೊಸ ದರಗಳು ಮಂಗಳವಾರದಿಂದಲೇ ಅನ್ವಯವಾಗಿವೆ. ವೊಡಾಫೋನ್‌ನ 84 ದಿನಗಳ (ನಿತ್ಯ 1.5 ಜಿಬಿ ಡೇಟಾ) ಪ್ಯಾಕ್‌ ಶೇ 31ರಷ್ಟು ಹೆಚ್ಚಳದೊಂದಿಗೆ ₹599 ಹಾಗೂ ಏರ್‌ಟೆಲ್‌ ಪ್ಯಾಕ್‌ ₹598 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT