ಭಾನುವಾರ, ಜುಲೈ 25, 2021
21 °C

ಜೋಯಾಲುಕ್ಕಾಸ್‌ನಲ್ಲಿ ಬ್ಯಾಂಗಲ್‌ ಫೆಸ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜೋಯಾಲುಕ್ಕಾಸ್‌ನ 2021ನೇ ಆವೃತ್ತಿಯ ಬ್ಯಾಂಗಲ್‌ ಫೆಸ್ಟ್‌ನಲ್ಲಿ ಉತ್ತಮ ಕೊಡುಗೆಗಳು ಲಭ್ಯವಿವೆ. ಈ ಮೇಳದಲ್ಲಿ ಗ್ರಾಹಕರು ತಮ್ಮ ಇಷ್ಟದ ಬಳೆ ಖರೀದಿಯ ಮೇಲೆ ಮೇಕಿಂಗ್‌ ಚಾರ್ಜ್‌ನಲ್ಲಿ ಶೇ 30ರಷ್ಟು ಉಳಿತಾಯ ಮಾಡಬಹುದು’ ಎಂದು ಜೋಯಾಲುಕ್ಕಾಸ್ ಕಂಪನಿ ತಿಳಿಸಿದೆ.

‘ಬ್ಯಾಂಗಲ್ ಫೆಸ್ಟ್ ಇದುವರೆಗಿನ ನಮ್ಮ ಕೆಲವು ಅತ್ಯುತ್ತಮ ವಿನ್ಯಾಸಗಳನ್ನು ಪ್ರದರ್ಶಿಸುತ್ತದೆ. ದೊಡ್ಡ ಉಳಿತಾಯದೊಂದಿಗೆ ವೈವಿಧ್ಯಮಯ ಬಳೆ ಸಂಗ್ರಹವನ್ನು ಹೊಂದಲು ಗ್ರಾಹಕರನ್ನು ನಾವು ಆಹ್ವಾನಿಸುತ್ತಿದ್ದೇವೆ’ ಎಂದು ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜಾಯ್‌ ಅಲುಕ್ಕಾಸ್‌ ಹೇಳಿದ್ದಾರೆ.

ಸರ್ಕಾರ ಇತ್ತೀಚೆಗೆ ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್‌ ಕಡ್ಡಾಯಗೊಳಿಸಿದೆ. ವಿಶೇಷ ಕೊಡುಗೆಯ ಅವಧಿಯಲ್ಲಿ, ಗ್ರಾಹಕರು ತಮ್ಮ ಹಳೆಯ ಚಿನ್ನಾಭರಣಗಳನ್ನು ಹೊಚ್ಚ ಹೊಸ 916 ಬಿಐಎಸ್ ಹಾಲ್‌ಮಾರ್ಕ್‌ ಆಭರಣದೊಂದಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೆ, ಜೋಯಲುಕ್ಕಾಸ್‌ನಲ್ಲಿ ಖರೀದಿಸಿದ ಎಲ್ಲಾ ಆಭರಣಗಳ ಮೇಲೆ ಉಚಿತ ನಿರ್ವಹಣೆ ಮತ್ತು ಒಂದು ವರ್ಷದ ಉಚಿತ ವಿಮೆಯನ್ನು ಪಡೆಯಬಹುದು. ಆಗಸ್ಟ್ 3ರವರೆಗೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಎಲ್ಲ ಜೋಯಾಲುಕ್ಕಾಸ್‌ ಷೋರೂಂಗಳಲ್ಲಿ ಈ  ಕೊಡುಗೆಗಳು ಇರಲಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು