ಬೆಂಗಳೂರು: ಜೆಎಸ್ಡಬ್ಲ್ಯು ಎಂಜಿ ಮೋಟರ್ ಇಂಡಿಯಾ ಕಂಪನಿಯು ಇತ್ತೀಚೆಗೆ ಲಕ್ಷುರಿ ಬ್ರ್ಯಾಂಡ್ ಆದ ಎಂಜಿ ಸೆಲೆಕ್ಟ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಇದರ ಮಾರಾಟಕ್ಕೆ ಸಂಬಂಧಿಸಿದಂತೆ ದೇಶದ ವಿವಿಧೆಡೆ 12 ಡೀಲರ್ ಪಾಲುದಾರರನ್ನು ನೇಮಕ ಮಾಡುವುದಾಗಿ ತಿಳಿಸಿದೆ. ಪ್ರಥಮ ಹಂತದ ವಿಸ್ತರಣೆಯನ್ನು 13 ನಗರಗಳಲ್ಲಿರುವ 14 ಎಂಜಿ ಸೆಲೆಕ್ಟ್ ಎಕ್ಸ್ಪೀರಿಯನ್ಸ್ ಸೆಂಟರ್ಗಳ ಮೂಲಕ (ಟಚ್ ಪಾಯಿಂಟ್) ಖರೀದಿದಾರರಿಗೆ ಈ ಕಾರಿನ ಖರೀದಿ ಅನುಭವ ನೀಡಲು ಮುಂದಾಗಿದೆ.

ಬೆಂಗಳೂರಿನಲ್ಲಿ ಎಂಜಿ ಸೆಲೆಕ್ಟ್ ಅನ್ನು ಪ್ರತಿನಿಧಿಸಲು ಐಕಾನಿಕ್ ಆಟೊಮೊಬೈಲ್ಸ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

‘ಎಂಜಿ ಸೆಲೆಕ್ಟ್ ಗ್ರಾಹಕ ಕೇಂದ್ರಿತ ಕಾರ್ಯ ವಿಧಾನ ಹೊಂದಿದೆ. ಲಕ್ಷುರಿ ಖರೀದಿದಾರರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ’ ಎಂದು ಎಂಜಿ ಸೆಲೆಕ್ಟ್ನ ಕಾರ್ಯ ನಿರ್ವಾಹಕ ಮುಖ್ಯಸ್ಥ ಮಿಲಿಂದ್ ಷಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.