ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಹೋಮ್‌, ಕಮರ್ಷಿಯಲ್‌ಗೆ ಕೊಟ್ಟ ಸಾಲ ಎನ್‌ಪಿಎ: ಕರ್ನಾಟಕ ಬ್ಯಾಂಕ್ ಘೋಷಣೆ

Last Updated 20 ಜೂನ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಮತ್ತು ರಿಲಯನ್ಸ್‌ ಕಮರ್ಷಿಯಲ್‌ ಫೈನಾನ್ಸ್‌ ಕಂಪನಿಗಳು ಒಟ್ಟಾರೆ ₹ 160 ಕೋಟಿ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿದ್ದು, ಈ ಸಾಲ ಖಾತೆಗಳನ್ನು ‘ವಂಚನೆ’ ಎಂದುಕರ್ಣಾಟಕ ಬ್ಯಾಂಕ್‌ ಘೋಷಿಸಿದೆ.

‘ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಎರಡೂ ಕಂಪನಿಗಳಿಗೆ ನೀಡಿರುವ ಸಾಲ ಸೌಲಭ್ಯಗಳಲ್ಲಿನ ವಂಚನೆಯ ಬಗ್ಗೆ ಆರ್‌ಬಿಐಗೆ ಮಾಹಿತಿ ನೀಡಲಾಗಿದೆ. ರಿಲಯನ್ಸ್‌ ಹೋಮ್‌ ಫೈನಾನ್ಸ್‌ ₹ 21.94 ಕೋಟಿ ಹಾಗೂ ರಿಲಯನ್ಸ್ ಕಮರ್ಷಿಯಲ್‌ ಫೈನಾನ್ಸ್‌ ₹ 138.41 ಕೋಟಿ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿದೆ’ ಎಂದು ಕರ್ಣಾಟಕ ಬ್ಯಾಂಕ್ ಷೇರುಪೇಟೆಗೆ ಮಾಹಿತಿ ನೀಡಿದೆ.

ರಿಲಯನ್ಸ್‌ ಹೋಮ್‌ ಫೈನಾನ್ಸ್‌ ಜತೆ 2015ರಿಂದ ಹಾಗೂ ರಿಲಯನ್ಸ್‌ ಕಮರ್ಷಿಯಲ್‌ ಫೈನಾನ್ಸ್‌ ಜೊತೆ 2014ರಿಂದ ವ್ಯವಹಾರ ಹೊಂದಿರುವು ದಾಗಿ ಬ್ಯಾಂಕ್‌ ತಿಳಿಸಿದೆ. 24ಕ್ಕೂ ಹೆಚ್ಚಿನ ಬ್ಯಾಂಕ್‌ಗಳು ಒಟ್ಟಾಗಿ ರಿಲಯನ್ಸ್‌ ಹೋಮ್‌ ಫೈನಾನ್ಸ್‌ಗೆ ಸಾಲ ನೀಡಿವೆ. ಇದರಲ್ಲಿ ಕರ್ಣಾಟಕ ಬ್ಯಾಂಕ್‌ನ ಪಾಲು ಶೇಕಡ 0.39ರಷ್ಟು. ರಿಲಯನ್ಸ್‌ ಕಮರ್ಷಿಯಲ್‌ ಫೈನಾನ್ಸ್‌ಗೆ 22 ಬ್ಯಾಂಕ್‌ಗಳು ಒಟ್ಟಾಗಿ ಸಾಲ ನೀಡಿದ್ದು ಅದರಲ್ಲಿ ಕರ್ಣಾಟಕ ಬ್ಯಾಂಕ್‌ ಪಾಲು ಶೇ 1.98ರಷ್ಟಿದೆ ಎಂದು ಅದು ಮಾಹಿತಿ ನೀಡಿದೆ. ಎರಡೂ ಖಾತೆಗಳನ್ನು ಎನ್‌ಪಿಎ (ವಸೂಲಾಗದ ಸಾಲ) ಎಂದು ವರ್ಗೀಕರಿಸಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT