ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ರಾಮಕೃಷ್ಣನ್ ಚಂದರ್, ನೇಮಕಗೊಂಡಿದ್ದಾರೆ.

ಡಿಸೆಂಬರ್ 1ರಂದು ಹೊರಡಿಸಿರುವ ಅಧಿಸೂಚನೆಯಂತೆ ರಾಮಕೃಷ್ಣನ್ ಚಂದರ್, ಎಲ್ಐಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿದ್ದಾರೆ.

1990ರಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಎಲ್ಐಸಿ ಸೇರಿಕೊಂಡಿದ್ದ ರಾಮಚಂದರ್, ಕಳೆದ ಮೂರು ದಶಕಗಳಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹಿರಿಯ ವಿಭಾಗೀಯ ವ್ಯವಸ್ಥಾಪಕ, ಮಾರ್ಕೆಟಿಂಗ್, ಪಿಂಚಣಿ ಮತ್ತು ಗ್ರೂಪ್ ಯೋಜನೆಗಳ ಪ್ರಾದೇಶಿಕ ವ್ಯವಸ್ಥಾಪಕ, ಎಲ್ಐಸಿಯ ಅಂತರರಾಷ್ಟ್ರೀಯ ಕಾರ್ಯಾಚರಣೆಗಳ ಕಾರ್ಯನೀತಿಯ ವ್ಯವಹಾರ ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಗಳನ್ನು ನಿರ್ವಹಿಸಿದ್ದರು.

ರಾಮಚಂದರ್ ಎಲ್ಐಸಿಯ ವಿವಿಧ ಕ್ಷೇತ್ರಗಳಲ್ಲಿ 35ಕ್ಕೂ ಹೆಚ್ಚು ವರ್ಷಗಳ ಅನುಭವವನ್ನು ಹೊಂದಿದ್ದಾರೆ.

ಈ ಹುದ್ದೆಗೂ ಮುನ್ನ ಎಲ್ಐಸಿಯ ಮುಖ್ಯ ಹೂಡಿಕೆ ಅಧಿಕಾರಿ (ಸಿಐಒ) , ಹೂಡಿಕೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಫ್ರಂಟ್ ಆಫೀಸ್) ಕಾರ್ಯನಿರ್ವಹಿಸಿದ್ದರು. ರಾಮಚಂದರ್ ನೇತೃತ್ವದಲ್ಲಿ ಎಲ್ಐಸಿ ಗಮನಾರ್ಹ ಸಾಧನೆಯನ್ನು ಮಾಡಿತ್ತು.

ಎಲ್ಐಸಿ ವ್ಯವಸ್ಥಾಪಕ ನಿರ್ದೇಶಕರಾಗಿ ರಾಮಚಂದರ್ ನೇಮಕಾತಿಯೊಂದಿಗೆ, ದೇಶದ ಅತಿ ದೊಡ್ಡ ಜೀವ ವಿಮಾ ನಿಗಮದ ಸ್ಥಾನ ಮತ್ತಷ್ಟು ಗಟ್ಟಿಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ ಎಲ್ಐಸಿಯ ಆಧುನೀಕರಣ, ನವೀನ ಉತ್ಪನ್ನಗಳು ಹಾಗೂ ಡಿಜಿಟಲ್ ಉಪಕ್ರಮಗಳನ್ನುಉತ್ತೇಜಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.