ಭಾನುವಾರ, ಏಪ್ರಿಲ್ 2, 2023
33 °C

ಅದಾನಿ: ಎಲ್‌ಐಸಿ ಹೂಡಿಕೆ ₹ 28,400 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅದಾನಿ ಸಮೂಹಕ್ಕೆ ಸೇರಿರುವ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯಲ್ಲಿ ಇನ್ನಷ್ಟು ಹಣ ಹೂಡಿಕೆ ಮಾಡುತ್ತಿದೆ. ಆದರೆ, ಕಂಪನಿಯ ಷೇರುಮೌಲ್ಯ ಕುಸಿತ ಕಂಡಿದ್ದರೂ, ಎಲ್‌ಐಸಿ ಇನ್ನೂ ನಿವ್ವಳ ನಷ್ಟ ಅನುಭವಿಸಿಲ್ಲ.

ಅದಾನಿ ಎಂಟರ್‌ಪ್ರೈಸಸ್‌ನ ಹೊಸ ಷೇರು ಮಾರಾಟ ಪ್ರಕ್ರಿಯೆಯ (ಎಫ್‌ಪಿಒ) ಸಂದರ್ಭದಲ್ಲಿ ಎಲ್‌ಐಸಿ ಆರಂಭಿಕ ಹೂಡಿಕೆದಾರ ಆಗಿ ಒಟ್ಟು ₹ 300 ಕೋಟಿ ತೊಡಗಿಸಿದೆ. ಆರಂಭಿಕ ಹೂಡಿಕೆದಾರರಿಗೆ ಮೀಸಲಾಗಿ ಇರಿಸಿದ್ದ ಷೇರುಗಳಲ್ಲಿ ಶೇಕಡ 5ರಷ್ಟನ್ನು ಎಲ್‌ಐಸಿ ಖರೀದಿಸಿದೆ.

33 ಸಾಂಸ್ಥಿಕ ಹೂಡಿಕೆದಾರರು ಒಟ್ಟು ₹ 5,985 ಕೋಟಿಯನ್ನು ಅದಾನಿ ಎಂಟರ್‌ಪ್ರೈಸಸ್‌ ಎಫ್‌ಪಿಒ ವೇಳೆ ಹೂಡಿಕೆ ಮಾಡಿದ್ದಾರೆ.
ಎಲ್‌ಐಸಿ ಈ ಕಂಪನಿಯಲ್ಲಿ ಈಗಾಗಲೇ ಶೇ 4.23ರಷ್ಟು ಷೇರುಗಳನ್ನು ಹೊಂದಿತ್ತು.

ಷೇರು ಮಾರುಕಟ್ಟೆಗಳಲ್ಲಿ ಇರುವ ಮಾಹಿತಿ ಪ್ರಕಾರ ಎಲ್‌ಐಸಿ ಕಳೆದ ಕೆಲವು ವರ್ಷಗಳಲ್ಲಿ, ಅದಾನಿ ಸಮೂಹದ ಕಂಪನಿಗಳಲ್ಲಿ ಒಟ್ಟು
₹ 28,400 ಕೋಟಿ ಹೂಡಿಕೆ ಮಾಡಿದೆ. ಹಿಂಡನ್‌ಬರ್ಗ್‌ ರಿಸರ್ಚ್‌ ವರದಿ ಬಹಿರಂಗ ಆಗುವ ಮೊದಲು ಈ ಹೂಡಿಕೆಯ ಮೌಲ್ಯವು ₹ 72,200 ಕೋಟಿ ಆಗಿತ್ತು.

ಎರಡು ದಿನಗಳ ವಹಿವಾಟಿನಲ್ಲಿ ನಡೆದ ಷೇರುಮೌಲ್ಯ ಕುಸಿತದ ನಂತರದಲ್ಲಿ ಎಲ್‌ಐಸಿ ಮಾಡಿರುವ ಹೂಡಿಕೆಯ ಮೌಲ್ಯವು ₹ 55,700 ಕೋಟಿಗೆ ಕುಸಿದಿದೆ. ಇಷ್ಟಾದ ನಂತರದಲ್ಲಿಯೂ ಎಲ್‌ಐಸಿಯ ಹೂಡಿಕೆಯು ನಿವ್ವಳ ಲಾಭದಲ್ಲಿಯೇ ಇದೆ. ಅಂದರೆ ಮೂಲ ಹೂಡಿಕೆ ಮೊತ್ತಕ್ಕೆ ಹೋಲಿಸಿದರೆ ಈಗ ಎಲ್‌ಐಸಿ ₹ 27,300 ಕೋಟಿಯಷ್ಟು ಲಾಭದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು