ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್|ಅಗತ್ಯವಲ್ಲದ ವಸ್ತುಗಳ ಪೂರೈಕೆಗೆ ಇ-ಕಾಮರ್ಸ್ ಕಂಪನಿಗಳಿಗೆ ಅನುಮತಿ ಇಲ್ಲ

Last Updated 19 ಏಪ್ರಿಲ್ 2020, 8:40 IST
ಅಕ್ಷರ ಗಾತ್ರ

ನವದೆಹಲಿ: ಮೇ.3ರವರೆಗೆ ಲಾಕ್‌ಡೌನ್ ವಿಸ್ತರಣೆಯಾಗಿರುವಾಗ ತೀರಾ ಅಗತ್ಯವಲ್ಲದ ವಸ್ತುಗಳ ತಲುಪಿಸಲು ಇ-ಕಾಮರ್ಸ್ ಕಂಪನಿಗಳಿಗೆ ಅನುಮತಿ ಇಲ್ಲ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ. ನಾಲ್ಕು ದಿನಗಳ ಹಿಂದೆ ತೆಗೆದುಕೊಂಡ ನಿರ್ಧಾರದಲ್ಲಿ ಬದಲಾವಣೆ ಮಾಡಿ ಸರ್ಕಾರ ಭಾನುವಾರ ಈ ರೀತಿ ಹೇಳಿದೆ.

ಇ-ಕಾಮರ್ಸ್ ಕಂಪನಿಗಳು ಏಪ್ರಿಲ್ 15ರಿಂದ ವಹಿವಾಟು ನಡೆಸಬಹುದು ಎಂದು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜ್ ಭಲ್ಲಾ ಆದೇಶ ನೀಡಿದ್ದರು. ಇದಕ್ಕೆ ಕಾಂಗ್ರೆಸ್ ಪಕ್ಷ ಸೇರಿದಂತೆ ವಿಪಕ್ಷಗಳು ಮತ್ತು ಇತರ ವ್ಯಾಪಾರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

2020 ಏಪ್ರಿಲ್ 15 ಮತ್ತು ಏಪ್ರಿಲ್ 16ರಂದು ಹೊರಡಿಸಲಾದ ಗೃಹ ಸಚಿವಾಲಯದ ಆದೇಶ ಸಂಖ್ಯೆ 40-3/2020 -ಡಿಎಂ -1 (ಎ) ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 10-2(1)ರ ಅಡಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಏಪ್ರಿಲ್ 20ರಿಂದ ಇ-ಕಾಮರ್ಸ್ ವಾಹನಗಳು ಸಂಚರಿಸಬಹುದು ಎಂದು ಆದೇಶ ನೀಡಿರುತ್ತಾರೆ ಎಂದು ಈ ಹಿಂದೆ ನೀಡಿದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಆದರೆ ಇದೀಗ ಪ್ರಕಟಣೆಯಲ್ಲಿ ತಿದ್ದುಪಡಿ ಮಾಡಿದ್ದು ತೀರಾ ಅಗತ್ಯವಲ್ಲದ ವಸ್ತುಗಳನ್ನು ತಲುಪಿಸುವ ಇ-ಕಾಮರ್ಸ್ ಕಂಪನಿಗಳ ವಾಹನಗಳಿಗೆ ಸಂಚಾರ ನಿರ್ಬಂಧ ಹೇರಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರ ಟ್ವೀಟಿಸಿದ್ದಾರೆ. ಅದೇ ವೇಳೆ ಇ-ಕಾಮರ್ಸ್ ಕಂಪನಿಗಳು ಅಗತ್ಯ ವಸ್ತುಗಳಾದ ಆಹಾರ ಮತ್ತು ಔಷಧಿಗಳನ್ನು ಪೂರೈಸಲು ಅನುಮತಿ ನೀಡಲಾಗಿದೆ.

ತೀರಾ ಅಗತ್ಯವಲ್ಲದ ವಸ್ತುಗಳನ್ನು ಪೂರೈಸಲು ಅನುಮತಿ ನೀಡಿದರೆ ಇ- ಕಾಮರ್ಸ್ ಕಂಪನಿಗಳು ಗೃಹೋಪಯೋಗಿ ವಸ್ತುಗಳು, ಲ್ಯಾಪ್‌ಟಾಪ್, ಪುಸ್ತಕ, ಬಟ್ಟೆ ಮೊದಲಾದವಸ್ತುಗಳನ್ನು ಪೂರೈಸಲಿವೆ.ಆದರೆ ಗ್ರಾಹಕರು ಮತ್ತು ಕಂಪನಿಗಳು ಲಾಕ್‍ಡೌನ್ ಮುಗಿಯುವವರೆಗೆ ಕಾಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT