ಬೆಂಗಳೂರು: ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಡಿಸೆಂಬರ್ 15ರಿಂದ ಜನವರಿ ಅಂತ್ಯದವರೆಗೆ ‘ಪ್ರಾಪರ್ಟಿ ವಿಸಿಟ್ ಫೆಸ್ಟ್’ ಆರಂಭಿಸಲಾಗುತ್ತಿದೆ ಎಂದು ರಿಯಲ್ ಎಸ್ಟೇಟ್ ವೇದಿಕೆಯಾದ ಮ್ಯಾಜಿಕ್ಬ್ರಿಕ್ಸ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಧೀರ್ ಪೈ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಡೆವಲಪರ್ಗಳ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಸುಮಧುರ ಡೆವಲಪರ್ಸ್, ಪ್ರಾವಿಡೆಂಟ್ ಗ್ರೂಪ್ ಮತ್ತು ಎಪಿಟಮ್ ಬಿಲ್ಡರ್ಸ್ ಇತ್ಯಾದಿ ಪಾಲುದಾರಿಕೆ ವಹಿಸಿವೆ ಎಂದರು.

ಪ್ರಾಪರ್ಟಿ ನೋಡಲು ಇಚ್ಛಿಸುವ ಖರೀದಿದಾರರು ವೇದಿಕೆಯಲ್ಲಿ ನೋಂದಾಯಿಸಿಕೊಂಡರೆ, ಅವರ ಮನೆಯಿಂದಲೇ ಉಚಿತವಾಗಿ ಕ್ಯಾಬ್ ಸೇವೆ ನೀಡಲಾಗುತ್ತದೆ. ಜೊತೆಗೆ, ಪ್ರಾಪರ್ಟಿ ಬಗ್ಗೆ ಸಮಗ್ರ ಮಾಹಿತಿ ನೀಡಲು ಸಲಹೆಗಾರರನ್ನು ಕೂಡ ನೀಡಲಾಗುತ್ತದೆ. ಈ ಫೆಸ್ಟ್ ಅಂಗವಾಗಿ 5 ಸಾವಿರಕ್ಕೂ ಹೆಚ್ಚು ಗ್ರಾಹಕರು ಪ್ರಾಪರ್ಟಿ ನೋಡುವ ಅಂದಾಜಿದೆ ಎಂದು ಹೇಳಿದರು.

ಬೆಂಗಳೂರಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆ ಹೆಚ್ಚುತ್ತಿದೆ. ಇದರಿಂದ ವಾಣಿಜ್ಯ ಮತ್ತು ವಸತಿ ನಿವೇಶನ ಅಗತ್ಯವೂ ಹೆಚ್ಚುತ್ತಿದೆ. ಕೋವಿಡ್ ನಂತರ ಮನೆಯಿಂದಲೇ ಕೆಲಸ ಮಾಡುವ ಜನರು ಇರುವುದರಿಂದ ಹೆಚ್ಚಾಗಿ 3 ಬೆಡ್ ರೂಂನ ಮನೆಗೆ ಬೇಡಿಕೆ ಹೆಚ್ಚುತ್ತಿದೆ. ಮನೆಗಳಿಗೆ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಈ ಪ್ರಾಪರ್ಟಿ ವಿಸಿಟ್ ಫೆಸ್ಟ್ ಅನ್ನು ಇತರೆ ನಗರಗಳಿಗೂ ವಿಸ್ತರಣೆ ಮಾಡಲಿದ್ದೇವೆ ಎಂದು ಹೇಳಿದರು.

ಬಿಲ್ಡರ್ಗಳು ನೀಡುವ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ರೇರಾಗೆ ಅನುಮತಿ ನೀಡಲು ಮನವಿ ಸಲ್ಲಿಸುತ್ತೇವೆ. ಈ ಪ್ರಕ್ರಿಯೆಯಿಂದ ಹೆಚ್ಚಾಗಿ ಕಾನೂನು ಸಮಸ್ಯೆಗಳು ಉದ್ಭವ ಆಗುವುದಿಲ್ಲ. ದೇಶದ 400ಕ್ಕೂ ಹೆಚ್ಚು ನಗರಗಳಲ್ಲಿ ಮ್ಯಾಜಿಕ್ಬ್ರಿಕ್ಸ್ ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ಮತ್ತು ನೋಯ್ಡಾದಲ್ಲಿ ಪ್ರಧಾನ ಕಚೇರಿ ಹೊಂದಲಾಗಿದೆ. 2,500ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.