ಜಂಟಿ ಸಹಭಾಗಿತ್ವದಿಂದ ಹಿಂದೆ ಸರಿದ ಮಹೀಂದ್ರಾ–ಪೋರ್ಡ್
ಮುಂಬೈ: ಭಾರತದಲ್ಲಿ ಜಂಟಿ ಉದ್ದಿಮೆ ಸ್ಥಾಪಿಸುವ ನಿರ್ಧಾರದಿಂದ ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳು ಹಿಂದೆ ಸರಿದಿವೆ.
ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ವಹಿವಾಟು ಸ್ಥಿತಿಯಲ್ಲಿ ಆಗಿರುವ ಬದಲಾವಣೆಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿಗಳು ಹೇಳಿವೆ.
ಭಾರತದಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಾಗಿ ಫೋರ್ಡ್ ತಿಳಿಸಿದೆ. ಈ ನಿರ್ಧಾರದಿಂದ ತನ್ನ ಯೋಜನೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಮಹೀಂದ್ರಾ ಹೇಳಿದೆ.
ಒಪ್ಪಂದ ಆಗಿದ್ದರೆ, ಫೋರ್ಡ್ ಕಂಪನಿಯ ಭಾರತದ ವ್ಯವಹಾರವು ಮಹೀಂದ್ರಾ ತೆಕ್ಕೆಗೆ ಬರುತ್ತಿತ್ತು. ಭಾರತದಲ್ಲಿ ಎರಡೂ ಕಂಪನಿಗಳ ಕಾರುಗಳನ್ನು ಜಂಟಿ ಪಾಲುದಾರಿಕಾ ಕಂಪನಿಯು (ಜೆವಿ) ಮಾರಾಟ ಮಾಡುವ ಯೋಜನೆ ರೂಪಿಸಲಾಗಿತ್ತು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.