ಭಾನುವಾರ, ಜೂನ್ 20, 2021
29 °C

ಮಲಬಾರ್: ಕಲಾತ್ಮಕ ಆಭರಣಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಲಬಾರ್ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ವತಿಯಿಂದ ‘ಕಲಾತ್ಮಕ ಆಭರಣಗಳ ಪ್ರದರ್ಶನ ಮತ್ತು ಮಾರಾಟ’ವನ್ನು ಕೋರಮಂಗಲ ಶಾಖೆಯ ಮಳಿಗೆಯಲ್ಲಿ ಜ.24ರವರೆಗೆ ಏರ್ಪಡಿಸಲಾಗಿದೆ.

ಪ್ರದರ್ಶನದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಉಪ ಬ್ರಾಂಡ್‌ಗಳಾದ ಮೈನ್ ಡೈಮಂಡ್ ಜ್ಯುವೆಲ್ಲರಿ, ಇಆರ್‌ಎ ಕತ್ತರಿಸದ ವಜ್ರದ ಆಭರಣಗಳು, ದೈವಿಕ ಭಾರತೀಯ ಪರಂಪರೆಯ ಆಭರಣಗಳು, ಕರಕುಶಲ ಆಭರಣಗಳು, ಅಮೂಲ್ಯ ರತ್ನದ ಆಭರಣಗಳು ಮತ್ತು ಸ್ಟಾರ್ಲೆಟ್ ಮಕ್ಕಳ ಆಭರಣಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಈ ಅವಧಿಯಲ್ಲಿ ವಜ್ರದ ಮೌಲ್ಯದಲ್ಲಿ ಗ್ರಾಹಕರು ಶೇ 20ವರೆಗೆ ರಿಯಾಯಿತಿ ಪಡೆಯಬಹುದು. ಮುಂಗಡವಾಗಿ ಶೇ 10ಕ್ಕಿಂತ ಮೇಲ್ಪಟ್ಟು ಪಾವತಿಸಿ , ಆಭರಣಗಳನ್ನು ಬುಕ್ ಮಾಡುವ ವ್ಯವಸ್ಥೆಯೂ ಇದೆ.

ಮಲಬಾರ್‌ ಸಮೂಹದ ಅಧ್ಯಕ್ಷ ಎ.ಪಿ.ಅಹಮ್ಮದ್, ‘ಕುಶಲಕರ್ಮಿಗಳ ಆಭರಣ ಸೃಷ್ಟಿ ಹಾಗೂ ಅವರ ಪರಿಣಿತಿ, ಕೌಶಲಗಳನ್ನು ಪ್ರದರ್ಶನದಲ್ಲಿ ಕಾಣಬಹುದು. ಆಭರಣ ಪ್ರಿಯರ ಗ್ರಹಿಕೆಗೆ ಸರಿಹೊಂದುವ ಕರಕುಶಲತೆ ಇಲ್ಲಿ ಅಭಿವ್ಯಕ್ತಿಯಾಗಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು